Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಂದಿನ ಜನ್ಮದಲ್ಲಿ ಪಾಣರ ಸಮುದಾಯದಲ್ಲಿ ಹುಟ್ಟುವ ಆಸೆಯಿದೆ – ನಟ ರಿಷಭ್ ಶೆಟ್ಟಿ

ಉಡುಪಿ : ನಟ ರಿಷಭ್ ಶೆಟ್ಟಿ ಉಡುಪಿಯಲ್ಲಿ ದೈವ ನರ್ತಕರಾದ ಪಾಣರ ನಲಿಕೆ ಸಮುದಾಯದ ಸಮಾವೇಶದಲ್ಲಿ ಭಾಗಿಯಾದರು. ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ನಿರ್ದೇಶಕ ದೈವಾರಾಧನೆ ಮತ್ತು ದೈವನರ್ತಕರ ಕುರಿತ ಕಾಂತಾರ ಸಿನೆಮಾ ಸೂಪರ್ ಡೂಪರ್ ಯಶಸ್ಸಿನ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಆಡಿದ ಮಾತು ಗಮನ ಸೆಳೆಯಿತು. ಅಮೆರಿಕಾದ ಮ್ಯೂಸಿಯಂನಲ್ಲಿ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿ.‌ ಮುಂದಿನ ಜನ್ಮದಲ್ಲಿ ಪಾಣರ ಸಮುದಾಯದಲ್ಲಿ ಹುಟ್ಟುವ ಆಸೆಯಿದೆ. ಪಾಣಾರನಾಗಿ ದೈವದ ಚಾಕರಿ ಮಾಡುವಂತಾಗಲಿ. ಪಂಜುರ್ಲಿ, ಗುಳಿಗ – ಅಣ್ಣಪ್ಪ ಸ್ವಾಮಿಯ ಸೇವೆ ಮಾಡುವಂತಾಗಲಿ ಎಂದು ರಿಷಭ್ ಶೆಟ್ಟಿ ಹೇಳಿದರು. ಸಮಾಜಮುಖಿ ಫೌಂಡೇಶನ್ ಮಾಡುತ್ತಿದ್ದು, ನಲಿಕೆ ಸಮುದಾಯದ ಓದುವ ಮಕ್ಕಳಿಗೆ ಟ್ರಸ್ಟ್ ನಿಂದ ಸಹಾಯ ಮಾಡುತ್ತೇವೆ. ಪಾಣರ ಸಮುದಾಯದ ಮಕ್ಕಳಲ್ಲಿ ಶಿಕ್ಷಣ ಜೊತೆಗೆ ಆಚಾರ ವಿಚಾರ ಮುಂದುವರೆಸುವಂತಾಗಲು ಸಮುದಾಯ ಭವನಕ್ಕೆ ಶಕ್ತಿಮೀರಿ ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ಜೊತೆ ಶಕ್ತಿ ಮೀರಿ ಒತ್ತಾಯ ಮಾಡುತ್ತೇನೆ ಎಂದು ದೈವ ನರ್ತಕ ಸಮುದಾಯಕ್ಕೆ ನಟ ರಿಷಭ್ ಶೆಟ್ಟಿ ಭರವಸೆ ನೀಡಿದರು.