ಮುಂಬೈಗೆ ಉಗ್ರರು ಪ್ರವೇಶಿಸಿದ್ದಾರೆಂದು ನಕಲಿ ಕರೆ – ಆರೋಪಿ ಪೊಲೀಸರ ವಶಕ್ಕೆ
ಮುಂಬೈ: ಮುಂಬೈಗೆ ಉಗ್ರರು ಪ್ರವೇಶಿಸಿದ್ದಾರೆ ಎಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಲಕ್ಷ್ಮಣ್ ನಾನಾವರೆ ಬಂಧಿತ ಆರೋಪಿ. ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವ್ಯಕ್ತಿಯೊಬ್ಬ, ಅಂದಾಜು 2-3 ಉಗ್ರರು ಮುಂಬೈ ಪ್ರವೇಶಿಸಿದ್ದು, ಅವರು ಮನ್ ಕುರ್ದ್ ನ ಏಕ್ತಾ ನಗರಕ್ಕೆ ಆಗಮಿಸಿದ್ದಾರೆ. ಅವರು ಏನೋ ಸಂಚು ನಡೆಸುತ್ತಿದ್ದಾರೆ ಎಂದು ನಕಲಿ ಕರೆ ಮಾಡಿದಾತ ಪೊಲೀಸರಿಗೆ ಮಾಹಿತಿ ನೀಡಿದ್ದ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ವ್ಯಕ್ತಿಯನ್ನು ಪತ್ತೆ ಹಚ್ಚಿದಾಗ ಆತ ಕುಡಿದ ಅಮಲಿನಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ನಕಲಿ ಕರೆ ಮಾಡಿರುವುದು ಪತ್ತೆಯಾಗಿದ್ದು, ಆತನನ್ನು ಬಂಧಿಸಿದ್ದಾರೆ.