ಮುಂಬೈನ ಖಾಸಗಿ ಹೋಟೆಲ್ನಲ್ಲಿ ನಟ ಅಮೀರ್ ಖಾನ್ ಪುತ್ರಿ ಇರಾಖಾನ್ ಮದುವೆ ಸಂಭ್ರಮ
ಮುಂಬೈ: ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಮಗಳಾದ ಇರಾಖಾನ್ ವಿವಾಹ ಮುಂಬೈನ ಖಾಸಗಿ ಹೋಟೆಲ್ನಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಇದೀಗ ಇರಾಖಾನ್ ಮದುವೆ ಶಾಸ್ತ್ರಗಳ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಅವನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಜ 3 ರಂದು ಮುಂಬೈನ ಖಾಸಗಿ ಹೋಟೆಲ್ನಲ್ಲಿ ಇರಾ ಖಾನ್ ಮದುವೆ ಅದ್ಧೂರಿ ನಡೆಯಲಿದ್ದು ಈ ಮದುವೆಯಲ್ಲಿ ಅನೇಕ ಸೆಲೆಬ್ರೆಟಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಅಮೀರ್ ಖಾನ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಇಡೀ ಮನೆ ದೀಪಾಲಂಕಾರದಿಂದ ಅಲಂಕೃತವಾಗಿದೆ. ಅಮೀರಾ ಖಾನ್ ಮಾಜಿ ಪತ್ನಿಯರಾದ ರೀನಾ ದತ್ತ ಅವರ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.