ಮುಂಬೈನ ಗ್ರಾಂಟ್ ರಸ್ತೆಯ ಕಾಮಾಟಿಪುರದ ರೆಸ್ಟೋರೆಂಟ್ ನಲ್ಲಿ ಭಾರಿ ಬೆಂಕಿ
ಮುಂಬಯಿ:ಮುಂಬೈನ ಕಾಮಾಟಿಪುರದ ಬಳಿ ಇರುವ ರೆಸ್ಟೋರೆಂಟ್ನಲ್ಲಿ, ಇಂದು ನಸುಕಿನ ಜಾವ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಓರ್ವ ಸಜೀವ ದಹನವಾಗಿದ್ದಾನೆ ಎಂದು ಮುಂಬೈ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹತ್ತಿರದಲ್ಲಿ ಮಾಲ್ ಮತ್ತು ಬಹುಮಹಡಿ ಕಟ್ಟಡದಲ್ಲಿದ್ದ ಜನರನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ ಎಂದು ಮುಂಬೈ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ 16 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದು ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.