Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಂಬೈ: ಸೂಪರ್ ಕಾಪ್ ದಯಾ ನಾಯಕ್ ತಂಡದ ಕಾರ್ಯಾಚರಣೆ- 4.6 ಕೋಟಿ ಮೌಲ್ಯದ ಡ್ರಗ್ಸ್ ವಶ..!

ಮುಂಬೈ ಬಾಂದ್ರಾದ ಕ್ರೈಂ ಬ್ರಾಂಚ್ ಪೊಲೀಸ್ ತಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳ ಡ್ರಗ್ ಜಾಲವನ್ನು ಭೇದಿಸಲು ಯಶಸ್ವಿಯಾಗಿದೆ.

ಮುಂಬೈ : ಮುಂಬೈ ಬಾಂದ್ರಾದ ಕ್ರೈಂ ಬ್ರಾಂಚ್ ಪೊಲೀಸ್ ತಂಡ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳ ಡ್ರಗ್ ಜಾಲವನ್ನು ಭೇದಿಸಲು ಯಶಸ್ವಿಯಾಗಿದೆ.

ಸೂಪರ್ ಕಾಪ್ ಪೊಲೀಸ್ ಅಧಿಕಾರಿ ದಯಾ ನಾಯಕ್ ಮತ್ತು ಅವರ ತಂಡ ಈ ಕಾರ್ಯಾಚರಣೆ ನಡೆಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಅರ್ಷದ್ ಅಹಮದ್ ಮೊಬಿನ್ ಶೇಖ್ ಮತ್ತು ಇಮ್ರಾನ್ ನೂರ್ ಮೊಹಮ್ಮದ್ ಮೆಮನ್ ಬಂಧಿತ ಆರೋಪಿಗಳಾಗಿದ್ದಾರೆ.

ಇನ್ನೊಬ್ಬ ಪ್ರಮುಖ ಆರೋಪಿ ದಿಶಾನ್ ಖಾನ್ @ ದಿಶಾನ್ ಬಟಾಟಾ ಈ ಪ್ರಕರಣದಲ್ಲಿ ಬೇಕಾಗಿದ್ದು ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಮೆಫೆಡ್ರೋನ್ (MD) ಎಂಬ ನಿಷೇಧಿತ ಮಾದಕ ಪದಾರ್ಥವಾಗಿದ್ದು ಒಟ್ಟು 2,033 ಗ್ರಾಂ MD (ಮೆಫೆಡ್ರೋನ್) ವಶಕ್ಕೆ ಪಡೆದಿದ್ದು ಇದರ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ 4 ಕೋಟಿ 6 ಲಕ್ಷ 60 ಸಾವಿರ ಎಂದು ಅಂದಾಜಿಸಲಾಗಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ.