ಮುರುಘಾ ಮಠದ ಹಣ ದುರುಪಯೋಗ.!
ಚಿತ್ರದುರ್ಗ; ಚಿತ್ರದುರ್ಗದ ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವಪ್ರಭುಶ್ರೀ ವಿರುದ್ಧ ಹಣ ದುರುಪಯೋಗ ಆರೋಪ ಕೇಳಿಬಂದಿದೆ.
ಮಠದ 24 ಲಕ್ಷ ರೂ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ರೇಖಾ ಅವರು ಬಸವಪ್ರಭುಶ್ರೀಗೆ ನೋಟಿಸ್ ನೀಡಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಸವಪ್ರಭುಶ್ರೀ, ಮಠದ ಹಣವನ್ನು ವಕೀಲರ ಸಂಭಾವನೆಗೆ ಬಳಸಿದ್ದೇವೆಂದು ಹೇಳಿದ್ದಾರೆ. ಮಠದ ಹಣ ದುರ್ಬಳಕೆ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.