ಮುರುಘಾ ಶರಣರ ಪ್ರಕರಣ ನಾಳೆಗೆ ಮುಂದೂಡಿಕೆ.!
ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧದ ಎರಡನೇ ಪೋಕ್ಸ್ ಪ್ರಕರಣದ ವಿಚಾರಣೆಯನ್ನು ಚಿತ್ರದುರ್ಗದ ಜಿಲ್ಲಾ & ಸತ್ರ ನ್ಯಾಯಾಲಯವು ನಾಳೆಗೆ ಮುಂದೂಡಿದೆ.
ಈ ವೇಳೆ ಆರೋಪಿ ವಿರುದ್ಧ ಬಾಡಿ ವಾರಂಟ್ ಹೊರಡಿಸಿರುವ ಕೋರ್ಟ್, ಖುದ್ದು ಹಾಜರುಪಡಿಸುವಂತೆ ಸೂಚಿಸಿದೆ. ಈಗಾಗಲೇ ಒಂದರಲ್ಲಿ ಶ್ರೀಗಳಿಗೆ ಜಾಮೀನು ಸಿಕ್ಕಿದೆಯಾದರೂ ಮತ್ತೊಂದು ಪ್ರಕರಣ ಬಾಕಿ ಇರುವ ಕಾರಣ ಶ್ರೀಗಳನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಶ್ರೀಗಳು ಎದುರಿಸುತ್ತಿದ್ದಾರೆ.