Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೂರೇ ವರ್ಷದಲ್ಲಿ ಭಾರತದಲ್ಲಿ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ – ಶಾಕಿಂಗ್ ವರದಿ ಬಹಿರಂಗ

ನವದೆಹಲಿ : 2019 ಮತ್ತು 2021 ರ ನಡುವೆ ಮೂರು ವರ್ಷಗಳಲ್ಲಿ ದೇಶದಲ್ಲಿ 13.13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳದವರು ನಾಪತ್ತೆಯಾಗಿದ್ದಾರೆ. ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ದೇಶಾದ್ಯಂತ 2019 ಮತ್ತು 2021 ರ ನಡುವೆ 18 ವರ್ಷಕ್ಕಿಂತ ಮೇಲ್ಪಟ್ಟ 10,61,648 ಮಹಿಳೆಯರು ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 2,51,430 ಹುಡುಗಿಯರು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ಈ ಡೇಟಾವನ್ನು ಸಂಗ್ರಹಿಸಿದೆ. ಮಧ್ಯಪ್ರದೇಶದಲ್ಲಿ 2019 ಮತ್ತು 2021 ರ ನಡುವೆ 1,60,180 ಮಹಿಳೆಯರು ಮತ್ತು 38,234 ಹುಡುಗಿಯರು ಕರ್ನಾಟಕದಲ್ಲಿ 40,000 ಮಹಿಳೆಯರು ನಾಪತ್ತೆ ಎಂದು ಸಂಸತ್ತಿಗೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ ಪಶ್ಚಿಮ ಬಂಗಾಳದಿಂದ 1,56,905 ಮಹಿಳೆಯರು ಮತ್ತು 36,606 ಹುಡುಗಿಯರು, ಮಹಾರಾಷ್ಟ್ರದಲ್ಲಿ 1,78,400 ಮಹಿಳೆಯರು ಮತ್ತು 13,033 ಹುಡುಗಿಯರು ನಾಪತ್ತೆಯಾಗಿದ್ದಾರೆ. ಒಡಿಶಾದಲ್ಲಿ 70,222 ಮಹಿಳೆಯರು ಮತ್ತು 16,649 ಹುಡುಗಿಯರು, ಛತ್ತೀಸ್ಗಢದಿಂದ 49,116 ಮಹಿಳೆಯರು ಮತ್ತು 10,817 ಹುಡುಗಿಯರು, ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯು ಅತಿ ಹೆಚ್ಚು ಕಾಣೆಯಾದ ಹುಡುಗಿಯರು ಮತ್ತು ಮಹಿಳೆಯರನ್ನು ದಾಖಲಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ, 2019 ಮತ್ತು 2021 ರ ನಡುವೆ 61,054 ಮಹಿಳೆಯರು ಮತ್ತು 22,919 ಹುಡುಗಿಯರು ನಾಪತ್ತೆಯಾಗಿದ್ದಾರೆ.