Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೃತಪಟ್ಟರೆ 1 ಕೋಟಿ ಪರಿಹಾರ: ಸರ್ಕಾರ ಆದೇಶ.!

 

ಮೈಸೂರು: ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ವನ್ಯಜೀವಿಧಾಮವೂ ಒಂದು. ಬಂಡೀಪುರದಲ್ಲಿ ಸಫಾರಿ ವೇಳೆ ಪ್ರಾಣಿ ದಾಳಿಯಾಗಿ ಮೃತಪಟ್ಟರೆ ಅಂಥವರ ಕುಟುಂಬಕ್ಕೆ 1 ಕೋಟಿ ನೀಡುವುದಾಗಿ ಅರಣ್ಯ ಇಲಾಖೆ ಘೋಷಿಸಿದೆ.

ಸಫಾರಿ ವೇಳೆ ಪ್ರಾಣಿಗಳ ದಾಳಿಯಿಂದ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತವೆ. ಈ ನಿಟ್ಟಿನಲ್ಲಿ ಸಫಾರಿಗೆ ಬರುವವರಿಗೆ ಟಿಕೆಟ್ ಜತೆಯಲ್ಲೇ ಈ ವಿಮೆಯನ್ನು ವಿತರಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.