ಮೆಂತ್ಯ ಚಹಾದಿಂದ ಎಷ್ಟಲ್ಲಾ ದೇಹಕ್ಕೆ ಪ್ರಯೋಜನ ಇದೆ.!
ಬಹುತೇಕರು ಗ್ರೀನ್ ಟೀ ಹಾಗೂ ಮಸಾಲಾ ಟೀಗಳನ್ನು ಕುಡಿದಿರುತ್ತೀರ ಅಲ್ಲವೆ. ಆದರೆ ಇದೀಗ ಮೆಂತ್ಯ ಚಹಾ ಕೂಡ ಜನಪ್ರಿಯವಾಗುತ್ತಿದೆ.
ಮೆಂತ್ಯ ಚಹಾ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದರ ಜೊತೆಗೆ ಹಲವು ಪ್ರಯೋಜನಗಳನ್ನು ಹೊಂದಿದೆ. ಮೆಂತ್ಯವನ್ನು ಚೆನ್ನಾಗಿ ಕುದಿಸಿ ಹಾಗೂ ಅದನ್ನು ಫಿಲ್ಟರ್ ಮಾಡಿಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ಬಿಸಿಯಾಗಿ ಸೇವಿಸಿದರೆ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು.
ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ. ದೇಹದ ಉಷ್ಣತೆಯಿಂದ ಬಳಲುತ್ತಿರುವವರಿಗೆ ಈ ಚಹಾ ಅಮೃತವಾಗಿದೆ ಎಂದರೆ ತಪ್ಪಿಲ್ಲ.