Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೆಕ್ಸಿಕೋ: ಉರಿ ಬಿಸಿಲಿನ ತಾಪಮಾನಕ್ಕೆ 100ಕ್ಕೂ ಅಧಿಕ ಮಂದಿ ಸಾವು

ಮೆಕ್ಸಿಕೋ: ಮೆಕ್ಸಿಕೋದಲ್ಲಿ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ಸಿಗೆ ತಲುಪಿದ್ದು, ಉಷ್ಣ ಅಲೆಯಿಂದಾಗಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

https://suddimane.com/%e0%b2%87%e0%b2%82%e0%b2%a6%e0%b3%81-sslc-%e0%b2%aa%e0%b3%82%e0%b2%b0%e0%b2%95-%e0%b2%aa%e0%b2%b0%e0%b3%80%e0%b2%95%e0%b3%8d%e0%b2%b7%e0%b3%86-%e0%b2%ab%e0%b2%b2%e0%b2%bf%e0%b2%a4%e0%b2%be%e0%b2%82/

ಮೆಕ್ಸಿಕೋದಲ್ಲಿ ಕಳೆದ ಎರಡು ವಾರಗಳಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕೆಲವು ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು, ಬಹಳಷ್ಟು ಮಂದಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಹುತೇಕ ಎಲ್ಲಾ ಸಾವುಗಳು ಹೀಟ್ ಸ್ಟ್ರೋಕ್‌’ ನಿಂದಲೇ ಸಂಭವಿಸಿದ್ದು, ಬೆರಳೆಣಿಕೆಯಷ್ಟು ನಿರ್ಜಲೀಕರಣದಿಂದ ಸಂಭವಿಸಿವೆ. ಸುಮಾರು ಶೇ. 64 ರಷ್ಟು ಸಾವುಗಳು ಟೆಕ್ಸಾಸ್‌’ನ ಗಡಿಯಲ್ಲಿರುವ ಉತ್ತರ ರಾಜ್ಯವಾದ ನ್ಯೂವೊ ಲಿಯಾನ್‌’ನಲ್ಲಿ ಸಂಭವಿಸಿವೆ. ಉಳಿದವುಗಳಲ್ಲಿ ಹೆಚ್ಚಿನವು ಗಲ್ಫ್ ಕರಾವಳಿಯ ನೆರೆಯ ತಮೌಲಿಪಾಸ್ ಮತ್ತು ವೆರಾಕ್ರಜ್‌ನಲ್ಲಿ ನಡೆದಿವೆ. ಇನ್ನೂ ಶಾಖದ ಅಲೆ ಕಡಿಮೆಯಾಗಿಲ್ಲ, ಸೊನೊರಾ ರಾಜ್ಯದಲ್ಲಿ, ಅಕೊಂಚಿ ಪಟ್ಟಣದಲ್ಲಿ ಬುಧವಾರದಂದು 49 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.