ಮೆಟ್ರೋ ಬಾಗಿಲಿಗೆ ಸಿಲುಕಿ ಗಂಭೀರ ಗಾಯಗೊಂಡ ಮಹಿಳೆ ಸಾವು
ದೆಹಲಿ: ಮಹಿಳೆಯೊರ್ವರು ಮೆಟ್ರೋ ಹಳಿ ಮೇಲೆ ಬಿದ್ದು ಸಾವನ್ನಪ್ಪಿದ ಘಟನೆ ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದೆ.
ಈ ದುರ್ಘಟನೆ ಡಿ. 14ರಂದು ನಡೆದಿದ್ದು, ರೀನಾ (35) ಎಂಬವರು ಎಂದು ಗುರುತಿಸಲಾಗಿದೆ. ರೀನಾ ಇಳಿಯುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿದ್ದು, ಆಕೆಯ ಸೀರೆ ಜಾಕೆಟ್ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಪ್ರಯಾಣಿಕರು ಕೂಗುತ್ತಿದ್ದಂತೆಯೇ ಮೆಟ್ರೋ ಹೊರಟೇ ಬಿಟ್ಟಿದೆ. ಇನ್ನು ರೈಲು ಪ್ಲಾಟ್ಫಾರಂನಿಂದ ಮುಂದೆ ಸಾಗಿದ ಬಳಿಕ ಆಕೆ ಪ್ಲಾಟ್ಫಾರಂನ ಕೊನೆಯ ಗೇಟ್ ಗೆ ಡಿಕ್ಕಿ ಹೊಡೆದು ಟ್ರ್ಯಾಕ್ ಮೇಲೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ರೀನಾ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಘಟನೆ ವೇಳೆ ಮೆಟ್ರೋ ಬಾಗಿಲುಗಳನ್ನು ಅಳವಡಿಸಿದ್ದ ಸೆನ್ಸರ್ ಕೂಡ ಕೆಲಸ ಮಾಡಲಿಲ್ಲ. ಇದರಿಂದಾಗಿ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.