Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊದಲು ಜೋ ನಂತರ ಕಮಲಾ! – ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಹತ್ಯೆ ಮಾಡಿದ ಎಫ್‌ಬಿಐ

ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮತ್ತು ಇತರ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಶಸ್ತ್ರಸಜ್ಜಿತ ವ್ಯಕ್ತಿಯನ್ನು ಎಫ್‌ಬಿಐ ಏಜೆಂಟ್‌ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಸಾಲ್ಟ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿರುವ ಕ್ರೆಹ್ ಡೆಲೆವ್ ರಾಬರ್ಟ್‌ಸನ್ ಎಂಬಾತನ ಮನೆಯಲ್ಲಿ ಆಗಸ್ಟ್ 9ರಂದು ಬೆಳಗ್ಗೆ 6.15 ಕ್ಕೆ ಬಂಧನಕ್ಕೆ ಮತ್ತು ಸರ್ಚ್ ವಾರಂಟ್ ಯತ್ನಿಸುತ್ತಿದ್ದಾಗ ಗುಂಡಿನ ದಾಳಿ ನಡೆದ ಹಿನ್ನಲೆ ಹತ್ಯೆ ಮಾಡಲಾಗಿದೆ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಗುಂಡಿನ ದಾಳಿ ಸಂದರ್ಭದಲ್ಲಿ ರಾಬರ್ಟ್​ಸನ್ ಶಸ್ತ್ರಸಜ್ಜಿತನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಬರ್ಟ್‌ಸನ್ ಮರಗೆಲಸ ವ್ಯಾಪಾರವನ್ನು ಹೊಂದಿದ್ದು, ಆದರೆ ರಾಜ್ಯ ದಾಖಲೆಗಳ ಪ್ರಕಾರ ಕಳೆದ ವರ್ಷ ಅವರ ವ್ಯಾಪಾರಕ್ಕೆ ನೀಡಿದ್ದ ಲೈಸೆನ್ಸ್​ ಮುಗಿದಿದ್ದು ಮತ್ತೆ ಪರವಾನಗಿಯನ್ನು ನವೀಕರಿಸಲಿಲ್ಲ. ಲಿಂಕ್ಡ್​ಇನ್​ನಲ್ಲಿ ರಾಬರ್ಟ್​ಸನ್ 45 ವರ್ಷಗಳ ಕಾಲ ಸ್ಟ್ರಕ್ಚರಲ್ ಸ್ಟೀಲ್ ಮತ್ತು ವೆಲ್ಡಿಂಗ್ ಇನ್ಸ್​ಪೆಕ್ಟರ್ ಆಗಿ ಸೇವೆ ಸಲ್ಲಿಸಿರುವುದಾಗಿ ಬರೆದುಕೊಂಡಿದ್ದಾರೆ. ಅವರು ನಿವೃತ್ತರಾದ ಮೇಲೆ ಮರಗೆಲಸ ಉದ್ಯಮ ಆರಂಭ ಮಾಡಿದ್ದರು ಎನ್ನಲಾಗಿದೆ.

ಮೊದಲು ಜೋ ನಂತರ ಕಮಲಾ!

ಜೋ ಬೈಡನ್ ಅವರನ್ನು ಕೊಲೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪೋಸ್ಟ್​ ಮಾಡಿದ್ದ. ಇದಲ್ಲದೇ ಹತ್ಯೆ ಕುರಿತಾಗಿ 2022 ರ ಸೆಪ್ಟೆಂಬರ್ ಆತ, ” ಮೊದಲು ಜೋ ನಂತರ ಕಮಲಾ”! ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದ ಎಂದು ಅಧಿಕಾರಿಗಳು ಹೇಳುತ್ತಾರೆ.