Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಟಾಪರ್ ಆಗಿ ಮಿಂಚಿದ ಸೃಷ್ಟಿ ದೇಶಮುಖ್

ಭೋಪಾಲ್: ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಂದಾದ UPSCಯಲ್ಲಿ ಮೊದಲ ಪ್ರಯತ್ನದಲ್ಲೇ 5ನೇ ರ್‍ಯಾಂಕ್ ಪಡೆಯುವ ಮೂಲಕ ಸೃಷ್ಟಿ ಜಯಂತ್ ದೇಶಮುಖ್ ದಾಖಲೆ ಬರೆದಿದ್ದು, ಇವರ ಸಕ್ಸಸ್ ಸ್ಟೋರಿ ಎಲ್ಲರಿಗೂ ಸ್ಪೂರ್ತಿದಾಯಕ.

ಭೋಪಾಲ್ ನಲ್ಲಿ 1996ರ ಮಾರ್ಚ್ 28ರಂದು ಜನಿಸಿದ ಸೃಷ್ಟಿ ಜಯಂತ್ ದೇಶಮುಖ್ ಅವರು 2018ರ UPSC ಪರೀಕ್ಷೆಯಲ್ಲಿ ಯಶಸ್ವಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಇನ್ನು ಈಕೆ ಐಎಎಸ್ ಅಧಿಕಾರಿಯಾಗುವುದರ ಜೊತೆಗೆ ಲೇಖಕಿಯೂ ಹೌದು. ಸೃಷ್ಟಿ ಜಯಂತ್ ದೇಶಮುಖ್ ಅವರ ತಂದೆ ಜಯಂತ್ ದೇಶಮುಖ್ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಮತ್ತು ತಾಯಿ ಸುನೀತಾ ದೇಶಮುಖ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ.

10 ನೇ ತರಗತಿಯಲ್ಲಿ 10 CGPA ಮತ್ತು 12 ರಲ್ಲಿ ಶೇಕಡಾ 93 ಅಂಕಗಳನ್ನು ಪಡೆದಿದ್ದ ಸೃಷ್ಟಿ ಇದಾದ ನಂತರ ಸೃಷ್ಟಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಅದರೊಂದಿಗೆ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ಕೂಡ ಆರಂಭಿಸಿದ್ದರು.

ಸೃಷ್ಟಿ ಜಯಂತ್ ದೇಶ್ ಮುಖ್ ಯುಪಿಎಸ್ಸಿ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ 5 ನೇ ರ್ಯಾಂಕ್ ಗಳಿಸಿದರು. ಅವರು ಬ್ಯಾಚ್ ನ ಮಹಿಳಾ ಟಾಪರ್ ಆಗಿದ್ದರು.

ಐಎಎಸ್ ಸೃಷ್ಟಿ ಜಯಂತ್ ದೇಶಮುಖ್ ಅವರು ತಮ್ಮ ಬ್ಯಾಚ್ ಮೇಟ್, ಕನ್ನಡಿಗ, ಐಎಎಸ್ ಡಾ. ನಾಗಾರ್ಜುನ ಬಿ. ಗೌಡ ಅವರೊಂದಿಗೆ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ.