Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊರೊಕ್ಕೊ: ಪ್ರಬಲ ಭೂಕಂಪಕ್ಕೆ 296ಕ್ಕೂ ಹೆಚ್ಚು ಮಂದಿ ಸಾವು

ಮೊರೊಕ್ಕೊ:ಶುಕ್ರವಾರ ತಡರಾತ್ರಿ ಮೊರೊಕ್ಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 296ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ದಾಖಲಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 11 ಗಂಟೆ ನಂತರ ಮರಕೇಶನ್‌ನ ನೈಋತ್ಯಕ್ಕೆ 72 ಕಿಮೀ. ಹಾಗೂ ಅಟ್ಲಾಸ್‌ ಪರ್ವತದ ಪಟ್ಟಣವಾದ ಒಕೈಮೆಡ್‌ನಿಂದ 56 ಕಿಮೀ. ಪಶ್ಚಿಮಕ್ಕೆ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದೆ

ಹಲವಾರು ಕಟ್ಟಡಗಳು ಧೂಳುಮಯವಾಗಿರುವ, ಅಲುಗಾಡುತ್ತಿರುವ, ಜನರೆಲ್ಲರೂ ಸ್ಥಳಾಂತರಿಸುವ ವೀಡಿಯೊಗಳನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.