Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೋಸ್ಟ್​ ವಾಂಟೆಡ್ ನಕ್ಸಲ್ ಚೈನುರಾಮ್ ಬಂಧನ

ಮಹಾರಾಷ್ಟ್ರ: ಮಹಾರಾಷ್ಟ್ರದ ಗಡ್​ಚಿರೋಲಿಯಲ್ಲಿ ಮೋಸ್ಟ್​ ವಾಂಟೆಡ್ ನಕ್ಸಲ್​ನನ್ನು ಬಂಧಿಸಲಾಗಿದ್ದು, ಆತನನ್ನು ಹಿಡಿದುಕೊಟ್ಟವರಿಗೆ 16 ಲಕ್ಷ ರೂ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಭಾಗದ ಗಡ್‌ಚಿರೋಲಿ ಬಳಿ ಹಾರ್ಡ್‌ಕೋರ್ ನಕ್ಸಲೈಟ್ ಚೈನುರಾಮ್ ಅಲಿಯಾಸ್ ಸುಕ್ಕು ವಾಟೆ ಕೊರ್ಸಾ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಸುಳಿವಿನ ಆಧಾರದ ಮೇಲೆ ಸಿ-60 ಗಡ್‌ಚಿರೋಲಿಯ ಸಿಬ್ಬಂದಿ ಜರವಂಡಿಯಿಂದ ಸೊಹಗಾಂವ್‌ಗೆ ಹೋಗುವ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ವಾಟೆ ಕೊರ್ಸಾನನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಕೊರ್ಸಾ ಹಿಡಿದುಕೊಟ್ಟವರಿಗೆ 16 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.