Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಯಡಿಯೂರಪ್ಪ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ತಿಳಿಸಿದ್ದೇನೆ’- ಯತ್ನಾಳ್‌

ವಿಜಯಪುರ:ಕರ್ನಾ ಟಕದಲ್ಲಿ ನಡೆದಿರುವ ಹೊಂದಾಣಿಕೆ ಮತ್ತು ಕೆಟ್ಟ ರಾಜಕೀಯ ವ್ಯವಸ್ಥೆಯ ವಾಸ್ತವ ಚಿತ್ರಣದ ಕುರಿತು ಬಿಜೆಪಿ ರಾಷ್ಟ್ರೀ ಯ ಘಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂ ದ್ರ ಗೃಹ ಸಚಿವ ಅಮಿತ್ ಶಾ, ಅರುಣ್ ಸಿಂ ಗ್, ರಾಧಾಮೋ ಹನ್ ಅಗರವಾಲ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿ ಬಂದಿದ್ದೇನೆ. ದೆಹಲಿ ಭೇಟಿ ಅತ್ಯಂತ ಯಶಸ್ವಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವಧಿಯಲ್ಲಿ ನಡೆದ ಕೋ ವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರವಾಗಿ ತಿಳಿಸಿದ್ದೇನೆ. ನಾನು ಬಹಿರಂಗವಾಗಿ ಆರೋಪ ಮಾಡಿರುವುದಕ್ಕೆಯಾವುದೇ ಎಚ್ಚರಿಕೆಯನ್ನಾಗಲಿ, ಕ್ರಮಕೈಗೊಳ್ಳುವುದಾಗಿ ಹೇಳಿಲ್ಲ, ನಡ್ಡಾ ಮತ್ತು ಅಮಿತ್ ಶಾ ಅವರು ಅತ್ಯಂತ ಗೌರವಯುತವಾಗಿ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದರು.

ದೆಹಲಿ ಭೇಟಿ ಎಲ್ಲ ರೀ ತಿಯಲ್ಲೂ ನನಗೆ ಸಂತೃಪ್ತಿಯಾಗಿದೆ. ರಾಜ್ಯ ಬಿಜೆಪಿಯಲ್ಲಿ ಭವಿಷ್ಯದಲ್ಲಿ ನಡೆಯುವ ಬದಲಾವಣೆ ಬಗ್ಗೆಯೂ ವರಿಷ್ಠರು ತಿಳಿಸಿದ್ದಾರೆ.ಆದರೆ, ವಿಜಯೇಂದ್ರ ಜಾಲ ತಾಣದಲ್ಲಿ ಯತ್ನಾಳಗೆ ವರಿಷ್ಠರಿಂದ ಶಿಸ್ತು ಕ್ರಮದ ಎಚ್ಚರಿಕೆ, ಪಕ್ಷದಿಂದ ಉಚ್ಛಾಟಿಸುವುದಾಗಿ ಸೂಚನೆ ಎಂದು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ ಎಂದು ಆರೋಪಿಸಿದರು.