Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯಶವಂತಪುರ-ಕಾರಟಗಿ ರೈಲ್ವೆ ಮಾರ್ಗ ಬದಲಾವಣೆ – 30 ದಿನ ರೂಟ್ ಚೇಂಜ್‌

ಹುಬ್ಬಳ್ಳಿ: ಅಮೃತ್‌ ಭಾರತ್‌ ನಿಲ್ದಾಣ ಯೋಜನೆಯಡಿ ಬಳ್ಳಾರಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಸಲುವಾಗಿ ಪ್ಲಾಟ್ ಫಾರ್ಮ್ -3ರಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರಿಗೆ ಅವಕಾಶ ನಿರ್ಬಂಧಿಸಿದೆ. ಹೀಗಾಗಿ, ಯಶವಂತಪುರ ಮತ್ತು ಕಾರಟಗಿ ನಿಲ್ದಾಣಗಳ ಮಧ್ಯ ಸಂಚರಿಸುತ್ತಿರುವ ಡೈಲಿ ಎಕ್ಸ್‌ಪ್ರೆಸ್ ರೈಲುಗಳನ್ನು (16545/16546) 30 ದಿನಗಳ ಕಾಲ ಮಾರ್ಗ ಬದಲಾವಣೆ ಮಾಡಲಾಗುವುದು ನೈರುತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ. ಸೆ.24 ರಿಂದ ಅ.23 ರವರೆಗೆ ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‌ಪ್ರೆಸ್ ರೈಲು ಓಬಳಾಪುರಂ, ಬಳ್ಳಾರಿ ಬೈಪಾಸ್ ಕ್ಯಾಬಿನ್, ಬಳ್ಳಾರಿ ಕಂಟೋನ್ಮೆಂಟ್ ಮತ್ತು ಕುಡತಿನಿ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ. ಕಾರಟಗಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಕುಡತಿನಿ, ಬಳ್ಳಾರಿ ಕಂಟೋನ್ಮೆಂಟ್, ಬಳ್ಳಾರಿ ಬೈಪಾಸ್ ಕ್ಯಾಬಿನ್ ಮತ್ತು ಓಬಳಾಪುರಂ ನಿಲ್ದಾಣಗಳ ಮೂಲಕ ಸಂಚರಿಸಲಿದ್ದು, ಬಳ್ಳಾರಿ ಜಂಕ್ಷನಲ್ಲಿ ನಿಲುಗಡೆ ಇರುವುದಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿ ಕಂಟೋನ್ಮೆಂಟ್ ನಿಲ್ದಾಣದಲ್ಲಿ 5 ನಿಮಿಷಗಳ ತಾತ್ಕಾಲಿಕ ನಿಲುಗಡೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.