Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿ

ನವದೆಹಲಿ : ದೆಹಲಿಯ ಬಿಜೆಪಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಎರಡು ದಿನಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಿ, ಯುವಕರು, ಬಡವರು, ಮಹಿಳೆಯರು ಮತ್ತು ರೈತರನ್ನು ಗಮನದಲ್ಲಿಟ್ಟುಕೊಂಡು ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನ ದೇಶಾದ್ಯಂತ ಪಕ್ಷದೊಂದಿಗೆ ಸಂಪರ್ಕಿಸಲು ಬಿಜೆಪಿ ಅಭಿಯಾನ ನಡೆಸಲಿದೆ. ಜತೆಗೆ ಮೋದಿ ಅವರು ಜನವರಿಯಲ್ಲಿ ದೇಶಾದ್ಯಂತ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಮತದಾರರೊಂದಿಗೆ ಸಂಪರ್ಕದಲ್ಲಿರಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕಾರ್ಯಕರ್ತರು ಆಯಾ ಬೂತ್ ಗಳ ಮತದಾರರ ಮನೆಗಳಿಗೆ ಹೋಗಿ ಅವರನ್ನ ಭೇಟಿ ಮಾಡಬೇಕು ಎಂದು ಹೇಳಲಾಗಿದೆ.