Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುವಕರೇ ಹುಷಾರ್..! ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್ ಎಮೋಜಿ ಕಳಿಸಿದ್ರೆ ಜೈಲು ಶಿಕ್ಷೆ ಗ್ಯಾರಂಟಿ

ಕುವೈತ್ : ಪ್ರೀತಿ ಎಂದರೆ ಪವಿತ್ರವಾದುದು. ಮೊದಲಿನ ಕಾಲದಲ್ಲಿ ಪ್ರೀತಿಯ ಭಾವನೆ ವ್ಯಕ್ತಪಡಿಸಬೇಕು ಅಂದರೆ ಬಹಳ ದಿನಗಳೇ ತೆಗೆದುಕೊಳ್ಳುತ್ತಿತ್ತು. ಭಯ, ನಾಚಿಕೆ ಎಲ್ಲವೂ ಆವರಿಸಿಕೊಳ್ಳುತ್ತಿತ್ತು. ಮನಸ್ಸಿನಿಂದ ಪ್ರೀತಿ ಹುಟ್ಟಿಕೊಳ್ಳುತ್ತಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಹಾಗಿಲ್ಲ ಪ್ರೀತಿಗೆ ಅರ್ಥವೇ ಇಲ್ಲದ ಹಾಗೇ ಆಗಿದೆ. ಎಲ್ಲವೂ ಮೊಬೈಲ್ ಮಯ. ಮೇಸೆಜ್‌ನಿಂದ ಎಲ್ಲಾ ಭಾವನೆಗಳು, ಮಾತು ಕಥೆ ನಡೆಯುತ್ತದೆ. ಪ್ರತಿಯೊಂದಕ್ಕೂ ಎಮೋಜಿ ಕಳಿಸುವ ಮೂಲಕ ಭಾವನೆ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಹೆಚ್ಚಾಗಿ ಕೆಲವು ಹುಡುಗರು ಹುಡುಗಿಯರಿಗೆ ಅಸಭ್ಯ, ಎಮೋಜಿಗಳನ್ನು ಕಳಿಸಿ ಹಿಂಸೆ ನೀಡುತ್ತಿರುತ್ತಾರೆ. ಆದರೆ ಇನ್ನು ಮುಂದೆ ಹಾರ್ಟ್‌ ಎಮೋಜಿಗಳನ್ನು ಕಳಿಸಿ ಕಿರುಕುಳ ನೀಡಿದರೇ ಅಂಥವರು ಜೈಲ್‌ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಹೌದು, ಇಂಥದೊಂದು ಕಾನೂನುನನ್ನು ಕುವೈತ್ ಸರ್ಕಾರ ಜಾರಿಗೊಳಿಸಿದೆ. ಕುವೈತ್ ಮತ್ತು ಸೌದಿ ಅರೇಬಿಯಾದಲ್ಲಿ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್‌, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್‌ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಿದೆ. ಒಂದು ವೇಳೆ ಕಾನೂನು ಮೀರಿ ಕಳಿಸಿದರೇ 2 ವರ್ಷ ಜೈಲು ಶಿಕ್ಷೆ, 2,000 ದಂಡ ವಿಧಿಸಿದೆ. ಮೆಸೇಜ್ ಕಳುಹಿಸುವವರ ವಿರುದ್ಧ ಹುಡುಗಿಯರು ದೂರು ನೀಡಿದರೆ ಅದನ್ನು ಕಿರುಕುಳದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಪ್ರಕರಣ ಪದೇ ಪದೇ ಮರುಕಳಿಸಿದರೆ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ, 3 ಲಕ್ಷ ಸೌದಿ ರಿಯಾಲ್‌ಗಳನ್ನು ದಂಡವಾಗಿ ಕಟ್ಟಬೇಕಾಗುತ್ತದೆ.