Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಯುವ ನಿಧಿಗೆ ನೋಂದಣಿ ಹೇಗೆ? ಯಾರಿಗೆಲ್ಲಾ ಸಿಗಲಿದೆ.! ಅರ್ಹತೆಗಳೇನು ಡಿಟೈಲ್.!

 

ಬೆಂಗಳೂರು: ಯುವ ನಿಧಿ ಯೋಜನೆಯಡಿ 2 ವರ್ಷ ನಿರುದ್ಯೋಗ ಭತ್ಯೆ ಪಡೆಯಲು ಬಯಸುವವರು ಇದೇ 26ರಿಂದ ಅರ್ಜಿ ಸಲ್ಲಿಸಬಹುದಾಗಿದೆ. https://sevasindhu.karnataka.gov.in ಈ ವೆಬ್​​ಸೈಟ್ ಮೂಲಕ ಯುವನಿಧಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಜನವರಿ 2024 ರಲ್ಲಿ ಯುವ ನಿಧಿಯ ಮೊದಲ ಕಂತಿನ ಹಣ ಪಾವತಿಯಾಗಲಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಲಿದೆ.

ಯುವ ನಿಧಿಗೆ ಅರ್ಜಿ ಸಲ್ಲಿಸಲು ಯಾರು ಅರ್ಹರಲ್ಲ?

ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆದು ಅಧ್ಯಯನ ಮುಂದುವರೆಸಿರುವವರು.

ಯಾವುದೇ ಅಪ್ರೆಂಟಿಸ್‌ ಹುದ್ದೆಗೆ ನಿಯೋಜನೆಗೊಂಡಿರುವವರು.

ಸರ್ಕಾರಿ ಮತ್ತು ಖಾಸಗಿ ವಲಯ ಉದ್ಯೋಗ ಪಡೆದಿರುವವರು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಆಧಾರ್ ಕಾರ್ಡ್‌

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

ಪದವಿ ಅಥವಾ ವೃತ್ತಿಪರ ಕೋರ್ಸ್‌ ಪಡೆದ ಪ್ರಮಾಣ ಪತ್ರ ಅಥವಾ ಪಾಸ್‌ ಸರ್ಟಿಫಿಕೇಟ್‌

ಕೋರ್ಸ್‌ ಮುಗಿದು 6 ತಿಂಗಳಾದರೂ ಉದ್ಯೋಗ ಪಡೆಯದ ಕುರಿತು ಸ್ವಯಂ ದೃಢೀಕೃತ ಪ್ರಮಾಣ ಪತ್ರ ಅಥವಾ ನೋಟರಿ

ಬ್ಯಾಂಕ್‌ ಖಾತೆ ಪಾಸ್ ಬುಕ್‌ ಪ್ರತಿ

ಒಟ್ಟಿನಲ್ಲಿ ಡಿಗ್ರಿ, ಡಿಪ್ಲೋಮಾ ಮುಗಿಸಿ ಉದ್ಯೋಗ ನೀರಿಕ್ಷೆಯಲ್ಲಿರುವ ನಿರುದ್ಯೋಗಿ ಯುವಕ, ಯುವತಿಯರಿಗೆ 2 ವರ್ಷ ಉದ್ಯೋಗ ಸಿಗುವ ವರೆಗೂ ಯುವ ನಿಧಿ ಮೂಲಕ ಹಣ ದೊರೆಯಲಿದೆ.