ಯೆಮೆನ್ ನಲ್ಲಿ ಇರಾನ್ ಬೆಂಬಲಿತ ‘ಹೌದಿ’ ನೆಲೆಗಳ ಮೇಲೆ ಅಮೇರಿಕಾ, ಬ್ರಿಟನ್ ದಾಳಿ
ವಾಷಿಂಗ್ಟನ್: ಇರಾನ್ ಮೂಲದ ಹೌದಿ ಬಂಡುಕೋರರ ಗುಂಪು ಪದೇ ಪದೇ ಹಡಗುಗಳ ಮೇಲೆ ದಾಳಿ ನಡೆಸುವ ಮೂಲಕ ಜಾಗತಿಕ ವ್ಯಾಪಾರಕ್ಕೆ ಧಕ್ಕೆ ತರುತ್ತಿದೆ. ಈ ನಿಟ್ಟಿನಲ್ಲಿ ಬಂಡುಕೋರರನ್ನು ಮಟ್ಟಹಾಕುವ ಸಲುವಾಗಿ ಅಮೆರಿಕ ಹಾಗೂ ಬ್ರಿಟನ್ ಫೆ 3 ರಂದು ಯೆಮನ್ ನಲ್ಲಿ 36 ಹೌದಿ ಶಿಬಿರಗಳನ್ನು ಗುರಿ ಮಾಡಿ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಉಭಯ ರಾಷ್ಟಗಳು ಅಧಿಕಾರಿಗಳು, “ಅಂತಾರಾಷ್ಟ್ರೀಯ ಹಾಗೂ ವಾಣಿಜ್ಯ ಶಿಪ್ಪಿಂಗ್ ನೌಕೆಗಳ ಮೇಲೆ ಹೌದಿಗಳು ಕೆಂಪು ಸಮುದ್ರ ದಾಟುವ ವೇಳೆ ನಡೆಸುವ ದಾಳಿಗೆ ಪ್ರತಿಯಾಗಿ, ಯೆಮನ್ ನ 13 ಕಡೆಗಳಲ್ಲಿ 36 ಹೌದಿ ನೆಲೆಗಳನ್ನು ಗುರಿಮಾಡಿಕೊಂಡು ಅಮೆರಿಕ ಹಾಗೂ ಬ್ರಿಟನ್ ನ ಸೇನೆಗಳು ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.
ಇನ್ನು ಜಾಗತಿಕ ವ್ಯಾಪಾರಕ್ಕೆ ಅಪಾಯ ಪಡಿಸುತ್ತಿರುವ ಹಾಗೂ ಅಮಾಯಕ ಸಮುದ್ರಯಾನಿಗಳ ಜೀವಕ್ಕೆ ಪ್ರಾಣಾಪಾಯ ಒಡ್ಡಿರುವ ಹೌದಿಗಳ ಬಲವನ್ನು ಕಡಿಮೆ ಮಾಡಲು ಈ ನಿಖರ ದಾಳಿ ನಡೆಸಲಾಗಿದೆ. ಇದರೊಂದಿಗೆ ಕ್ಷಿಪಣಿ ವ್ಯವಸ್ಥೆ, ಉಡಾವಣೆ ವ್ಯವಸ್ಥೆ ಮೇಲೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ರಾಡಾರ್ ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿರುವ ವ್ಯವಸ್ಥೆ ಮೇಲೆ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.