Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜಕೀಯ ಪ್ರವೇಶಕ್ಕೆ ನಟ ವಿಜಯ್ ತಾಲೀಮು.!

 

ಚೆನೈ: ತಮಿಳು ನಟ ದಳಪತಿ ವಿಜಯ್ ರಾಜಕೀಯ ಪ್ರವೇಶಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಿಜಯ್, ಧನ್ಯವಾದ ತಿಳಿಸಿದ್ದಾರೆ.

“ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ ನಾನು ಆರಂಭಿಸಿರುವ ಈ ರಾಜಕೀಯ ಪಯಣದಲ್ಲಿ ನನಗೆ ಶುಭ ಹಾರೈಸಿದ ವಿವಿಧ ರಾಜಕೀಯ ಪಕ್ಷಗಳು, ಚಿತ್ರರಂಗದ ಸ್ನೇಹಿತರು, ತಮಿಳುನಾಡಿನ ನನ್ನ ಸಹೋದರ, ಸಹೋದರಿಯರು, ತಾಯಂದಿರು ಹಾಗೂ ಮಾಧ್ಯಮ ಸ್ನೇಹಿತರಿಗೆ ನನ್ನ ಕೃತಜ್ಞತೆಗಳು ಎಂದಿದ್ದಾರೆ.