Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಜಕೀಯ ಸಂಬಂಧಕ್ಕೆ ಸರ್ಕಾರ ರೈತರನ್ನು ಬಲಿ ಕೊಡುತ್ತಿದೆ’ – ಸಿ.ಟಿ ರವಿ ವಾಗ್ದಾಳಿ

ಮಂಡ್ಯ: ರಾಜಕೀಯ ಸಂಬಂಧಕ್ಕೆ ಸರ್ಕಾರ ರೈತರನ್ನು ಬಲಿ ಕೊಡುತ್ತಿದ್ದು, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧನಿ ಎತ್ತದಿದ್ದರೇ ಬದುಕಿದ್ದೂ ಸತ್ತಂತೆ ಎಂದು ಮಾಜಿ ಸಚಿವ ಸಿ.ಟಿ ರವಿ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ನಡೆಯುತ್ತಿರುವ ಕಾವೇರಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇದು ಸರ್ಕಾರದ ಅಸಹಾಯಕತೆಯೋ ಅಥವಾ ತಮಿಳುನಾಡು ಜೊತೆ ಸೇರಿ ಬೆಂಗಳೂರು ಜನರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದೋ ಗೊತ್ತಿಲ್ಲ. ಆದ್ರೆ ರಾಜಕೀಯ ಸಂಬಂಧಕ್ಕೆ ರೈತರನ್ನು ಸರ್ಕಾರ ಬಲಿ ಕೊಡುತ್ತಿದೆ ಎಂದರು.

ಇನ್ನು ಅಧಿಕಾರದಲ್ಲಿ ಇದ್ದಾಗಲೂ ಗೂಂಡಾ, ದಾಷ್ಟ್ಯ ಪ್ರದರ್ಶಿಸಬಾರದು. ದಾಷ್ಯ ಪ್ರದರ್ಶನ ಅಧಿಕಾರದಲ್ಲಿ ಇದ್ದವರಿಗೆ ಇರಬಾರದು. ಗೂಂಡಾತನ, ದಾಷ್ಟ್ಯತನ ಪ್ರದರ್ಶಿಸುವವರಿಗೆ ಜನ ಸರಿ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.