ರಾಜಸ್ಥಾನದ ಸಿಎಂ ಆಗಿ ಭಜನ್ ಲಾಲ್ ಶರ್ಮಾ
ರಾಜಸ್ಥಾನ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಜನ್ ಲಾಲ್ ಶರ್ಮಾ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ವಿಶೇಷ ಅಂದರೆ ಭಜನ್ ಲಾಲ್ ಶರ್ಮಾ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಆದರೆ ನಾಲ್ಕು ಬಾರಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಸ್ಪೀಕರ್ ಆಗಿ ಶಾಸಕ ವಾಸುದೇವ್ ದೇವ್ನಾನಿ ಅವರನ್ನು ನೇಮಿಸಲಾಗಿದೆ.
ಪಕ್ಷ ಸಂಘಟನೆಯಲ್ಲಿ ಅವರ ಪ್ರಮುಖ ಪಾತ್ರವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಹುದ್ದೆಯ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ. ಶರ್ಮಾ ಅವರು ಈ ಬಾರಿ ಕಾಂಗ್ರೆಸ್ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48,081 ಮತಗಳ ಅಂತರದಿಂದ ಸೋಲಿಸಿ ಸಂಗನೇರ್ ಸ್ಥಾನವನ್ನು ಗೆದ್ದಿದ್ದರು.
ನೂತನ ಡಿಸಿಎಂ ಪ್ರೇಮ್ಚಂದ್ ಭೈರ್ವಾ ಮತ್ತು ದಿಯಾ ಕುಮಾರಿ ಅವರನ್ನು ಆಯ್ಕೆ ಮಾಡಲಾಗಿದೆ.