Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯ ಸರ್ಕಾರದಿಂದ ನಿವೃತ್ತ ನೌಕರರಿಗೆ ಬಿಗ್ ಶಾಕ್!

 

ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ನೌಕರರಿಗೆ ಸರ್ಕಾರ ದೊಡ್ಡ ಆಘಾತ ನೀಡಿದೆ.

ಸರ್ಕಾರದ ಸಚಿವಾಲಯ ಮತ್ತು ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತಿಯಾಗಿರುವ ಅಧಿಕಾರಿ ಹಾಗೂ ನೌಕರರಿಗೆ ಈ ಕೂಡಲೇ ಕೆಲಸದಿಂದ ಬಿಡುಗಡೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಆದೇಶಿಸಿದ್ದಾರೆ.

ಅವರು ನಿರ್ವಹಿಸುತ್ತಿದ್ದ ಕೆಲಸದ ಜಾಗದಲ್ಲಿ ಹಾಲಿ ಸರ್ಕಾರಿ ಅಧಿಕಾರಿ  ನೌಕರರನ್ನೇ ನಿಯೋಜಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.