Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನೀರು ಹಂಚಿಕೆ ವಿವಾದ ಉದ್ಭವವಾಗಿದೆ’ – ಶೋಭಾ

ಮೈಸೂರು: ರಾಜ್ಯ ಸರ್ಕಾರದ ಬೇಜವಾಬ್ದಾರಿಯಿಂದ ಕಾವೇರಿ ನೀರು ಹಂಚಿಕೆ ವಿವಾದ ಉದ್ಭವವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿದ್ದಾರೆ. ಅವರು ತಮಿಳುನಾಡನ್ನು ಓಲೈಸಿಕೊಳ್ಳಲು ಮುಂದಾಗಿರಬೇಕು ಎಂದರು.

ಇನ್ನು ಸರಿಯಾದ ಕಾವೇರಿ ಕೊಳ್ಳದ ಅಧ್ಯಯನ ಮಾಡದೇ ಇರಬಹುದು, ಈ ಕಾರಣದಿಂದಲೇ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ. ನ್ಯಾಯಾಲಯಕ್ಕೆ ಅಂಕಿ ಅಂಶ ನೀಡಿಲ್ಲ. ಇದರ ಬದಲು ಪ್ರಧಾನಿಯನ್ನು ದೂರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಕೇವಲ ತಮಿಳುನಾಡು ಕರ್ನಾಟಕಕ್ಕೆ ಅಲ್ಲ. ಬೇರೆ ರಾಜ್ಯದ ಜಲ ವಿವಾದ ಸಹಾ ಪಿಎಂ ಬಗೆಹರಿಸಬೇಕಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯದ ಕನ್ನಡಪರ ಸಂಘಟನೆ, ರೈತರ ಜೊತೆಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.