Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಮರ – ಇಂದು ರಾಜ್ಯ ರಾಜಧಾನಿ ಬಂದ್ ಏನಿರುತ್ತೆ? ಏನಿರಲ್ಲ?

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸದೇ ಆಟ ಆಡುತ್ತಿರುವ ಸಾರಿಗೆ ಇಲಾಖೆ ವಿರುದ್ಧ ಖಾಸಗಿ ‌ಸಾರಿಗೆ ಸಂಘಟನೆ ಸಿಡಿಮಿಡಿಗೊಂಡಿದೆ. ಸರ್ಕಾರಕ್ಕೆ ಮನವಿ ಮಾಡಿ ಸಾಕಾಗಿದೆ. ಹೀಗಾಗಿ, ಇಂದು ಬೆಂಗಳೂರು ಬಂದ್ ಮಾಡುತ್ತಿದ್ದೇವೆ ಎಂದು ಹಲವು ಚಾಲಕರ ಒಕ್ಕೂಟ ಹೇಳಿವೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ಸೆಡ್ಡು ಹೊಡೆಯಲು ಸಿದ್ಧವಾಗಿವೆ. ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಸಂಘಟನೆಗಳಿಂದ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿವೆ. ಆಟೋ ಚಾಲಕರಿಗೆ ಕ್ಯಾಬ್ ಚಾಲಕರು, ಶಾಲಾ ವಾಹನಗಳ ಚಾಲಕರು ಕೂಡ ಸಾಥ್ ನೀಡಲಿದ್ದಾರೆ. ನೆಲಮಂಗಲ, ಕೆಂಗೇರಿ, ವೈಟ್ ಫೀಲ್ಡ್, ಕೆ ಆರ್ ಪುರ, ಆನೇಕಲ್ ಭಾಗದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್​ ಬಳಿ ಆಗಮಿಸಲಿದ್ದಾರೆ. ಈಗಾಗಲೇ ಖಾಸಗಿ ಸಾರಿಗೆ ಸಂಘಟನೆಗಳಿಂದ ಸದಸ್ಯರಿಗೆ ರೂಟ್ ಮ್ಯಾಪ್ ತಲುಪಿದೆ. ಪ್ರಮುಖ ಬೇಡಿಕೆಗಳೇನು? – ಖಾಸಗಿ ಬಸ್‌ಗಳನ್ನ ಶಕ್ತಿಯೋಜನೆ ವ್ಯಾಪ್ತಿಗೆ ತರಬೇಕು – 3.64 ಲಕ್ಷ ಆಟೋ ಚಾಲಕರಿಗೆ ಮಾಸಿಕ 10 ಸಾವಿರ ನೀಡಬೇಕು – ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧ ಮಾಡಬೇಕು – 10-15 ಲಕ್ಷ ಮೌಲ್ಯದ ವಾಹನಗಳಿಗೆ ಜೀವಿತಾವಧಿ ತೆರಿಗೆ ಬದಲು ಈ ಹಿಂದಿನ ನಿಯಮವೇ ಜಾರಿಗೆ ತರಬೇಕು – ಏರ್‌ಪೋರ್ಟ್ ಟ್ಯಾಕ್ಸಿಗಳಿಗೆ ಒಂದೇ ದರ ನಿಗದಿ ಮಾಡಬೇಕು – ಅಸಂಘಟಿತ ವಾಣಿಜ್ಯ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು – ಚಾಲಕರಿಗೆ ವಸತಿ ಯೋಜನೆ ನೀಡಬೇಕು ಏನೆಲ್ಲಾ ಇರಲ್ಲ? ಆಟೋ, ಖಾಸಗಿ ಟ್ಯಾಕ್ಸಿ, ಏರ್‌ಪೋರ್ಟ್ ಟ್ಯಾಕ್ಸಿ, ಶಾಲೆಗಳ ಖಾಸಗಿ ವಾಹನ, ಖಾಸಗಿ ಬಸ್, ಗೂಡ್ಸ್ ವಾಹನ ಏನೆಲ್ಲಾ ಇರುತ್ತೆ? ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಸರ್ಕಾರಿ ಟ್ಯಾಕ್ಸಿ (ಕೆಎಸ್‌ಟಿಡಿಸಿ), ರೈಲು, ಖಾಸಗಿ ಶಾಲೆ, ಚಿತ್ರರಂಗದ ಚಟುವಟಿಕೆ