ರಾಮನಿಗೆ ₹11 ಕೋಟಿ ವಜ್ರದ ಕಿರೀಟ ದೇಣಿಗೆ!
ಅಯೋಧ್ಯ: ರಾಮಲಲ್ಲಾ ಮೂರ್ತಿಗೆ ₹11 ಕೋಟಿ ಮೌಲ್ಯದ ಕಿರೀಟವನ್ನು ಗುಜರಾತ್ ಮೂಲದ ವಜ್ರ ವ್ಯಾಪಾರಿಯೊಬ್ಬರು ದೇಣಿಗೆ ನೀಡಿದ್ದಾರೆ.
ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕ ಮುಕೇಶ್ ಪಟೇಲ್ ಎಂಬುವವರು ಕಾಣಿಕೆ ಸಲ್ಲಿಸಿದ್ದಾರೆ. 6 KG ತೂಕದ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟ ಇದಾಗಿದೆ. ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಅಯೋಧ್ಯೆಗೆ ಆಗಮಿಸಿದ್ದರು. ಈ ವೇಳೆ ಮಂದಿರದ ಪ್ರಧಾನ ಅರ್ಚಕರು ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಕಿರೀಟ ಹಸ್ತಾಂತರಿಸಿದ್ದಾರೆ.