ರಾಮ್ ರಾಜ್ ಕಾಟನ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಿಡರ್ ಆದ ರಿಷಬ್ ಶೆಟ್ಟಿ
ಬೆಂಗಳೂರು: ಕಾಂತಾರ ಸಿನೆಮಾ ಮೂಲಕ ಇಡೀ ದೇಶಕ್ಕೆ ಪರಿಚಯವಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಇದೀಗ ರಾಮ್ರಾಜ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಟ ರಾಕಿಂಗ್ ಯಶ್ ಯಶ್ ಈ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಈ ವರ್ಷ ಆ ಅವಕಾಶ ರಿಷಬ್ ಪಾಲಾಗಿದೆ. ಇದನ್ನು ನೋಡಿ ಕೆಲವರಿಗೆ ಅಚ್ಚರಿಯಾಗಿದೆ. ‘ಕಾಂತಾರ’ ಸಿನಿಮಾ ಸಮಯದಿಂದಲೂ ರಿಷಬ್ ಹೆಚ್ಚು ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಡಿವೈನ್ ಸ್ಟಾರ್ ದೇಶಿ ಲುಕ್ ಗಮನ ಸೆಳೆಯುತ್ತಿತ್ತು.