ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ನಮಗೆ ಪವಿತ್ರ : ಸಿಟಿ ರವಿ
ಉಡುಪಿ: ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ನಮಗೆ ಪವಿತ್ರ ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಮಥುರಾ ಕಾಶಿ ದೇಗುಲ ವಿಮೋಚನೆಯ ಬಗ್ಗೆ ಸುಳಿವನ್ನು ನೀಡಿದರು.
ಮಥುರಾ ಶ್ರೀಕೃಷ್ಣ ದೇವಾಲಯ ವಿಮೋಚನ ವಿಚಾರವಾಗಿ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜ್ಞಾನ ವ್ಯಾಪಿಯ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಮಾಡಿದ ಪ್ರಾಯಶ್ಚಿತ ಮಾಡಿಕೊಳ್ಳಲು ಅವರಿಗೆ ಅವಕಾಶ ಎಂದರು.
ಅತಿಕ್ರಮಣದ ಜಾಗದಲ್ಲಿ ನಮಾಜ್ ಮಾಡುವುದು ಹರಾಮ್. ಇದನ್ನು ಸ್ವತಃ ಮುಸಲ್ಮಾನರೇ ಹೇಳುತ್ತಾರೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಟನ ಮಥುರಾ ನಮಗೆ ಪವಿತ್ರ ಎಂದು ತಿಳಿಸಿದರು.