Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!

ಚಿತ್ರದುರ್ಗ : ಚಿತ್ರದುರ್ಗದ ರಾಯರ ಮಠದಲ್ಲಿ ಪವಾಡವೊಂದು ನಡೆದಿದ್ದು, ಇಲ್ಲಿ ನಡೆದಾಡುವ ಶಕ್ತಿಯನ್ನು ಯುವತಿ ಪಡೆದಿದ್ದಾಳೆ. ವೀಲ್ ಚೇರ್‌ನಲ್ಲಿ ಇದ್ದ ಯುವತಿ ಎದ್ದು ಓಡಾಡುತ್ತಿದ್ದಾಳೆ.

ಹೌದು ಸ್ವಾಧೀನ ಕಳೆದುಕೊಂಡಿದ್ದ ಕಾಲಿಗೆ ಮರು ಜೀವ ಬಂದಿದೆ. 3 ಹೆಜ್ಜೆ ಹಾಕದವಳು , ರಾಯರಿಗೆ 3 ಸುತ್ತು ಪ್ರದಕ್ಷಿಣೆ ಹಾಕಿದ್ದಾಳೆ. ರಾಯರ ಮಠದಲ್ಲಿ ಹೆಜ್ಜೆ ಇಟ್ಟವಳ ಕಾಲುಗಳಿಗೀಗ ಮರು ಜೀವ ಬಂದಿದೆ. ಬೆಂಗಳೂರಿನ ಯಲಹಂಕದಲ್ಲಿ ವಾಸವಾಗಿರುವ ತೇಜಸ್ವಿನಿ, 19 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿರುವ ತೇಜಸ್ವಿನಿಗೆ 6 ತಿಂಗಳಿನಿಂದ ವೀಲ್ ಚೇರ್ ಅವಲಂಭಿಸಿದ್ದಳು.

ದೀಪಾವಳಿ ಸಂದರ್ಭದಲ್ಲಿ ಮಂತ್ರಾಲಯಕ್ಕೆ(Mantralaya) ತೆರಳಿದ್ದರು. 45 ದಿನದೊಳಗೆ ಶುಭ ಸುದ್ದಿ ಸಿಗಲಿದೆ ಎಂದು ಗುರುಗಳು ಆಶೀರ್ವಾದ ಮಾಡಿದ್ರು. ಈ ಮಧ್ಯೆ ಶಿವಮೊಗ್ಗ ಆಯುರ್ವೇದ ವೈದ್ಯರ ಬಳಿಯೂ ಚಿಕಿತ್ಸೆ ಪಡೆದಿದ್ದರೂ, ಕಳೆದ ಬುಧವಾರ ಶಿವಮೊಗ್ಗದಿಂದ ವಾಪಸ್ ಆಗುವಾಗ ಅಚ್ಚರಿ ಮಾರ್ಗ ಮಧ್ಯೆ ಚಿತ್ರದುರ್ಗದ ರಾಯ ಮಠಕ್ಕೆ ಭೇಟಿ. ರಾಯರ ಧ್ಯಾನ ಮಾಡುತ್ತಾ ಯುವತಿ ಪ್ರದಕ್ಷಿಣೆ ಹಾಕಿದ್ದಾಳೆ. ಇದೆಲ್ಲ ಗುರು ರಾಘವೇಂದ್ರರ ಮಹಿಮೆ ಅಂತಿದ್ದಾರೆ ಪೋಷಕರು.