ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಪಾಕ್ ಮಹಿಳೆ ಸೀಮಾ ಹೈದರ್
ನವದೆಹಲಿ: ಪಾಕಿಸ್ತಾನದಿಂದ ಭಾರತಕ್ಕೆ ಓಡಿ ಬಂದಿರುವ ಸೀಮಾ ಹೈದರ್ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮನವಿ ಪತ್ರದಲ್ಲಿ ಹೀರ್-ರಾಂಜಾ, ಲೈಲಾ-ಮಜ್ನು ಪ್ರೇಮಕಥೆಯನ್ನು ಸೀಮಾ ಪ್ರಸ್ತಾಪಿಸಿದ್ದಾರೆ. ‘ಸಚಿನ್ ಪ್ರೀತಿ ಪಡೆಯಲು ಭಾರತಕ್ಕೆ ಬಂದಿದ್ದು ಇಲ್ಲೇ ಇರಲು ಬಯಸುತ್ತೇನೆ. ತಾರೆಯರಾದ ಆಲಿಯಾ ಭಟ್, ಅಕ್ಷಯ್ ಕುಮಾರ್ ಅವರು ವಿದೇಶಿ ಪೌರತ್ವ ಹೊಂದಿದ್ದರೂ ಭಾರತದಲ್ಲಿ ವಾಸಿಸಲು ಸಾಧ್ಯವಾದರೆ ನಾನೇಕೆ ಇಲ್ಲಿ ಇರಬಾರದು?’ ಎಂದು ಅವರು ಮನವಿಯಲ್ಲಿ ಪ್ರಶ್ನಿಸಿದ್ದಾರೆ.
ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದಿಂದ ನಡೆಯುತ್ತಿರುವ ತನಿಖೆಯ ನಡುವೆ ಮತ್ತು ಪಾಕಿಸ್ತಾನಕ್ಕೆ ಗಡೀಪಾರು ಮಾಡುವ ಬೇಡಿಕೆಗಳು ಹೆಚ್ಚಾಗುತ್ತಿರುವ ಮಧ್ಯೆ ಸೀಮಾ ಹೈದರ್ ಈ ಅರ್ಜಿ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ವಿಚಾರಣೆಯಲ್ಲಿ, ಸೀಮಾ ಹೈದರ್ ನಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಐದು “ಅಧಿಕೃತ” ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳು ಮತ್ತು ಅಪೂರ್ಣ ಹೆಸರು ಮತ್ತು ವಿಳಾಸದೊಂದಿಗೆ ಒಂದು “ಬಳಕೆಯಾಗದ ಪಾಸ್‌ಪೋರ್ಟ್” ಮತ್ತು ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದಾರೆ.