Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಷ್ಟ್ರಪತಿ ಅಂಗಳಕ್ಕೆ ಕಾಲಿಟ್ಟ ಭಾರತ-ಪಾಕ್ ಪಬ್‌ಜಿ ಲವ್ ಮ್ಯಾರೇಜ್ – ಭಾರತದ ಪೌರತ್ವಕ್ಕಾಗಿ ರಾಷ್ಟ್ರಪತಿಗೆ ದಯಾ ಅರ್ಜಿ

ನೋಯ್ಡಾ : ಬಹು ಕುತೂಹಲ ಕೆರಳಿಸಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ ಹಾಗೂ ಭಾರತದ ಸಚಿನ್ ಪಬ್‌ಜಿ ಲವ್ ಮ್ಯಾರೇಜ್ ಈಗ ಭಾರತದ ರಾಷ್ಟ್ರಪತಿ ಅಂಗಳಕ್ಕೆ ಕಾಲಿಟ್ಟಿದೆ. ಈಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಳಿ ಸೀಮಾ ಹೈದರ್ ದಯಾ ಅರ್ಜಿ ಸಲ್ಲಿಸದ್ದಾಳೆ. ಈಕೆ ಅದರಲ್ಲಿ ಸಚಿನ್ ಪ್ರೀತಿಗಾಗಿ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದಾಳೆ. ಸೀಮಾ ಹೀರ-ರಾಂಜಾ, ಲೈಲಾ-ಮಜನು ಮತ್ತು ಶಿರಿ-ಫರಹಾದ ಇವರ ಪ್ರೇಮ ಕಥೆಯ ಉಲ್ಲೇಖ ಮಾಡಿದ್ದಾಳೆ. ಚಲನಚಿತ್ರ ನಟಿ ಅಲಿಯಾ ಭಟ್, ಅಕ್ಷಯ್ ಕುಮಾರ ಇವರ ಹೆಸರುಗಳನ್ನು ಕೂಡ ಉಲ್ಲೇಖಿಸುತ್ತ ವಿದೇಶಿ ಪೌರತ್ವ ಇದ್ದರೂ ಕೂಡ ಅವರು ಭಾರತದಲ್ಲಿ ವಾಸಿಸಬಹುದು, ಹಾಗಾದರೆ ನಾನು ಏಕೆ ವಾಸಿಸಲು ಸಾಧ್ಯವಿಲ್ಲ ?’, ಎಂದು ಪ್ರಶ್ನಿಸಿದ್ದಾಳೆ. 38 ಪುಟಗಳ ಈ ಮನವಿಯಲ್ಲಿ ಸೀಮಾಳು ರಾಷ್ಟ್ರಪತಿಗಳಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಬೇಕೆಂದು ವಿನಂತಿಸಿದ್ದಾಳೆ. ಬಾಂಗ್ಲಾದೇಶಿ, ಪಾಕಿಸ್ತಾನಿ ಅಥವಾ ಇತರ ದೇಶದಲ್ಲಿನ ಅನೇಕ ಜನರಿಗೆ ಭಾರತದ ಪೌರತ್ವ ನೀಡಲಾಗಿದೆ. ಕಳೆದು 5 ವರ್ಷಗಳಲ್ಲಿ 5 ಸಾವಿರದ 220 ವಿದೇಶಿ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಕಾರಣ ನಾನು ಈಗ ಭಾರತದ ಸೊಸೆಯಾಗಿದ್ದೇನೆ. ನನ್ನ ಮತ್ತು ಸಚಿನ್ ವಿವಾಹವಾಗಿದೆ. ಈ ಆಧಾರದಲ್ಲಿ ನನಗೂ ಕೂಡ ಪೌರತ್ವ ಸಿಗಬೇಕು. ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ. ನಾನು ಸುಳ್ಳು ಮಾತನಾಡುತ್ತಿಲ್ಲ. ಉಗ್ರ ನಿಗ್ರಹ ದಳವು ನನ್ನ ವಿಚಾರಣೆ ಮಾಡುತ್ತಿದೆ. ಸಿಬಿಐ, ರಾ, ಎನ್‌ಐಎ ಇವರು ನನ್ನ ವಿಚಾರಣೆ ನಡೆಸಿದರು, ಅದಕ್ಕಾಗಿ ನಾನು ಸಿದ್ಧಳಿದ್ದೆನೆ ಎಂದು ಸೀಮಾ ಹೈದರ್ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.