Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಹುಲ್ ಗಾಂಧಿ ‘ರಾವಣನ ಹೊಸ ಯುಗದ ಅವತಾರ’ -ಬಿಜೆಪಿ ಟ್ವೀಟ್

ನವದೆಹಲಿ: ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ರಾವಣನ ಹೊಸ ಯುಗದ ಅವತಾರ ಎಂದು ಬಿಜೆಪಿ ಬಣ್ಣಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಅವರನ್ನು ರಾವಣನ ಮಾದರಿಯಲ್ಲಿ ಬಿಂಬಿಸಿರುವ ಪೋಸ್ಟರ್‌ಅನ್ನು ಹಂಚಿಕೊಂಡಿದೆ. ಈ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದೆ. “ಹೊಸ ಯುಗದ ರಾವಣ ಇಲ್ಲಿದ್ದಾನೆ. ಅವನು ದುಷ್ಟ. ಧರ್ಮ ವಿರೋಧಿ. ರಾಮ ವಿರೋಧಿ. ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ. ಬಿಜೆಪಿಯ ಈ ಟ್ವೀಟ್ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ.