Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಹುಲ್ ಗೆ ಸದ್ಯಕ್ಕಿಲ್ಲ ರಿಲೀಫ್: ಮೋದಿ ಉಪನಾಮ ಕೇಸ್ ನ ಕುರಿತು ಆಗಸ್ಟ್​ 4ರಂದು ವಿಚಾರಣೆ ಎಂದ ಸುಪ್ರೀಂ

ಪ್ರಧಾನಿ ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ ರಾಹುಲ್​​ ಗಾಂಧಿ ಅವರು ತಮಗೆ ಸೂರತ್​​ ಕೋರ್ಟ್ ನೀಡಿದ್ದ 2 ವರ್ಷ ಜೈಲು ಶಿಕ್ಷೆ ಆದೇಶವನ್ನು ತಡೆ ನೀಡುವಂತೆ ಗುಜರಾತ್​ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಅರ್ಜಿಯನ್ನು ಆಗಸ್ಟ್​ 4ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿದೆ.
ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್​ ಕೋರ್ಟ್​​​ ರಾಹುಲ್​​ ಗಾಂಧಿ ಅವರಿಗೆ 2 ವರ್ಷಗಳ ಜೈಲು ಶಿಕ್ಷೆ ನೀಡಿತ್ತು. ಆದರೆ ರಾಹುಲ್​​ ಗಾಂಧಿ ಈ ಶಿಕ್ಷೆಯನ್ನು ತಡೆಯುವಂತೆ ಗುಜರಾತ್​ ಹೈಕೋರ್ಟ್​​ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗುಜರಾತ್​ ಹೈಕೋರ್ಟ್​​ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಅವರು ಜುಲೈ 15ರಂದು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ಸುಪ್ರೀಂ ಅವರ ಅರ್ಜಿಯನ್ನು ವಿಚಾರಣೆ ಮಾಡುವುದಾಗಿ ಜುಲೈ 18ರಂದು ಒಪ್ಪಿಗೆ ನೀಡಿತ್ತು, ಆದರೆ ಸುಪ್ರೀಂ ಇಂದು ಈ ವಿಚಾರಣೆಯನ್ನು ಆ.4ಕ್ಕೆ ಸುಪ್ರೀಂ ಮುಂದೂಡಿದೆ.
ಡಾ. ಅಭಿಷೇಕ್ ಮನು ಸಿಂಘ್ವಿ ಅವರು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ರಾಹುಲ್ ಗಾಂಧಿ ಪರ ವಾದ ಮಂಡಿಸಿದ್ದಾರೆ. ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ವಿಚಾರಣೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪಿದ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಜುಲೈ 21ರಂದು ವಿಚಾರಣೆ ನಡೆಸುದಾಗಿ ತಿಳಿಸಿದರು. ಇದೀಗ ವಿಚಾರಣೆಯನ್ನು ಆ.4ಕ್ಕೆ ಮುಂದೂಡಿದೆ ಎಂದು ಡಾ. ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಗುಜರಾತ್​​ ಸರ್ಕಾರ ಮತ್ತು ಅರ್ಜಿದಾರರಿಗೆ ನೋಟಿಸ್​​ ನೀಡಿದ್ದು, 10 ದಿನದ ಒಳಗೆ ಉತ್ತರ ನೀಡುವಂತೆ ತಿಳಿಸಿದೆ. ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್​​ ಗಾಂಧಿಯವರ ಮೋದಿ ಉಪನಾಮದ ಬಗ್ಗೆ ಭಾಷಣ ಮಾಡಿದ್ದರು. ಅವರು ತಮ್ಮ ಭಾಷಣದಲ್ಲಿ ಉದ್ಯಮಿಗಳಾದ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರನ್ನು ಉಲ್ಲೇಖಿಸಿ, ಇಬ್ಬರೂ ಭಾರತದಲ್ಲಿ ಬೇಕಾಗಿರುವ ಪ್ರಮುಖ ಉದ್ಯಮಿಗಳು, ದೇಶಕ್ಕೆ ದ್ರೋಹ ಮಾಡಿ ಪರಾರಿಯಾಗಿದ್ದಾರೆ. ಈ “ಮೋದಿ” ಎಂಬ ಉಪನಾಮವು ಕಳ್ಳರಲ್ಲಿ ಸಾಮಾನ್ಯವಾಗಿದೆ ಎಂಬ ಹೇಳಿಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು. ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು 2019ರಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.