Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ: ಡೊನಾಲ್ಡ್ ಟ್ರಂಪ್…!

ವಾಷಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರ ನಡೆಯಲಿರುವ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಭಾನುವಾರ ಖಚಿತಪಡಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಸೈಟ್‌ವೊಂದರಲ್ಲಿ “ನಾನು ಯಾರು ಮತ್ತು ನನ್ನ ಅಧ್ಯಕ್ಷೀಯತೆಯು ಎಷ್ಟು ಯಶಸ್ವಿಯಾಗಿದೆ ಎಂದು ಸಾರ್ವಜನಿಕರಿಗೆ ಈಗಾಗಲೇ ತಿಳಿದಿದೆ. ಹಾಗಾಗಿ, ನಾನು ವಾದ ಮಾಡುವುದಿಲ್ಲ!” ಎಂದು ಬರೆದುಕೊಂಡಿದ್ದಾರೆ.

ಅಮೆರಿಕ ಅಧ್ಯಕೀಯ ಚುನಾವಣೆಗೆ ಈಗಿನಿಂದಲೇ ತಯಾರಿ ಪ್ರಾರಂಭವಾಗಿದೆ. ಈ ಬೆನ್ನಲ್ಲೇ ಟ್ರಂಪ್​ ತಮ್ಮ ಪ್ರತಿಸ್ಪರ್ಧಿ ಮತ್ತು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರನ್ನು ಅಸಂಬದ್ಧ “ಡಿಸಾಂಕ್ಟಿಮೋನಿಯಸ್” (DeSanctimonious) ಎಂದು ಕರೆದಿದ್ದು, ಅವರು “ಅಸ್ವಸ್ಥ ಹಕ್ಕಿಯಂತೆ ಅಪ್ಪಳಿಸುತ್ತಿದ್ದಾರೆ” ಎಂದು ಟೀಕೆ ಮಾಡಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ CBS ಪೋಲ್​ ವರದಿ ಹೊರ ಬಿದ್ದಿದೆ. ಈ ವರದಿಯಲ್ಲಿ ”ನಾನು ಸಾಕಷ್ಟು​ ಲೆಜೆಂಡರಿ ಮತಗಳನ್ನು ಪಡೆಯುವ ಮೂಲಕ ಕ್ಷೇತ್ರವನ್ನು ಮುನ್ನಡೆಸಲಿದ್ದೇನೆ ಎಂದು ಹೇಳಲಾಗಿದೆ. ಟ್ರಂಪ್​ ಶೇ62 , ಫ್ಲೋರಿಡಾ ಗವರ್ನರ್ ರಾನ್ ಶೇ 46 , ರಾಮಸ್ವಾಮಿ ಶೇ7 , ಪೆನ್ಸ್ ಶೇ 5 , ಸ್ಕಾಟ್ ಶೇ , ಹ್ಯಾಲಿ ಶೇ 2 , ಸ್ಲೋಪಿ ಕ್ರಿಸ್ ಕ್ರಿಸ್ಟಿ ಶೇ2, ಐಡಾ ಹಚಿನ್ಸನ್ ಶೇ 1 ರಷ್ಟು ಮತಗಳನ್ನು ಪಡೆದಿದ್ದಾರೆ ಎಂಬ ಮಾಹಿತಿಯನ್ನ ವರದಿ ನೀಡಿದೆ. ಸ್ವಾತಂತ್ರ್ಯ, ಗಡಿ ರಕ್ಷಣೆ, ಮಿಲಿಟರಿ, ತೆರಿಗೆ ಕಡಿತ, ಹಣದುಬ್ಬರವಿಲ್ಲದೇ ಇತಿಹಾಸದಲ್ಲಿ ಪ್ರಬಲ ಆರ್ಥಿಕತೆ ನೀಡಿದ್ದೇನೆ. ಹೀಗಾಗಿ, ನಾನು ಯಾರೆಂದು ಮತ್ತು ಎಂತಹ ಯಶಸ್ವಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದೇನೆ ಎಂದು ಸಾರ್ವಜನಿಕರಿಗೆ ಈಗಾಗಲೇ ತಿಳಿದಿದೆ. ಆದ್ದರಿಂದ ನಾನು ಚರ್ಚೆಗಳನ್ನು ಮಾಡುವುದಿಲ್ಲ” ಎಂದು ಡೊನಾಲ್ಡ್​ ಟ್ರಂಪ್​ ಹೇಳಿದ್ದಾರೆ.

ಆರ್​ ಎನ್​ ಸಿ ಚರ್ಚಾ ಸಮಿತಿಯ ಉಸ್ತುವಾರಿ ವಹಿಸಿಕೊಂಡಿರುವ ಮೆಕ್‌ಡೇನಿಯಲ್ ಮತ್ತು ಡೇವಿಡ್ ಬೋಸ್ಸಿ ಅವರು ಕಳೆದ ಕೆಲ ದಿನಗಳ ಹಿಂದಷ್ಟೇ ಡೊನಾಲ್ಡ್ ಟ್ರಂಪ್ ಅವರ ನ್ಯೂಜೆರ್ಸಿಯ ಬೆಡ್‌ಮಿನ್‌ಸ್ಟರ್ ಮನೆಗೆ ಭೇಟಿ ನೀಡಿ, ಚರ್ಚೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದ್ದರು. ಈ ನಡುವೆ ಮಾಜಿ ಅಧ್ಯಕ್ಷರು ತಮ್ಮ ಹುದ್ದೆಯ ಹೊರತಾಗಿಯೂ ಪ್ರಾಥಮಿಕ ಚರ್ಚೆಯಲ್ಲಿ ಭಾಗವಹಿಸಲು ನಿರ್ಧರಿಸಬಹುದು ಎಂದು ಟ್ರಂಪ್ ಸಲಹೆಗಾರರೊಬ್ಬರು ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.