ರೀಲ್ಸ್ ಮಾಡುವುದನ್ನು ನಿಲ್ಲಿಸು ಎಂದಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಪಾಟ್ನಾ: ಬಿಹಾರದ ಬೇಗುಸರಾಯ್ ನಲ್ಲಿ ರೀಲ್ಸ್ ಮಾಡಲು ಬಿಡದ್ದಕ್ಕೆ ಪತ್ನಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಸೇರಿಕೊಂಡು ಪತ್ನಿಯನ್ನೇ ಕೊಲಗೈದಿರುವ ಘಟನೆ ನಡೆದಿದೆ.
ಮಹೇಶ್ವರ್ ಕೊಲೆಯಾದ ವ್ಯಕ್ತಿಯಾಗಿದ್ದು, ಫಫೌತ್ ಗ್ರಾಮದವರಾದ ರಾಣಿ ಕುಮಾರಿ ಸುಮಾರು 6 ರಿಂದ 7 ವರ್ಷಗಳ ಹಿಂದೆ ಮಹೇಶ್ವರ್ ಅವರನ್ನು ವಿವಾಹವಾಗಿದ್ದರು.
ಇನ್ನು ಪತ್ನಿ ರೀಲ್ಸ್ ಮಾಡುತ್ತಿದ್ದದ್ದು ಪತಿ ಮಹೇಶ್ವರ್ ಇಷ್ಟವಿರಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಕಲಹ ನಡೆಯುತ್ತಿತ್ತು. ರೀಲ್ಸ್ ಮಾಡಬೇಡ ಎಂದಿದ್ದಕ್ಕೆ ಶುರುವಾದ ಜಗಳದಿಂದ ಆಕ್ರೋಶಗೊಂಡ ಪತ್ನಿ ತನ್ನ ಸಹೋದರ ಸಂಬಂಧಿಗಳೊಂದಿಗೆ ಸೇರಿಕೊಂಡು ಪತಿಯನ್ನು ಕೊಲೆಗೈದಿದ್ದಾರೆ ಎನ್ನಲಾಗಿದೆ.
ಮಹೇಶ್ವರ್ ಅವರ ತಮ್ಮ ಮೊಬೈಲ್ ಕರೆ ಮಾಡಿದ ಬಳಿಕ ಯಾರೋ ಬೇರೊಬ್ಬರು ಕರೆಯನ್ನು ಸ್ವೀಕರಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಈ ಸಂಬಂಧ ಪತ್ನಿ ಹಾಗೂ ಅವರ ಸಂಬಂಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.