Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರುಚಿಕರವಾದ ಬಟರ್ ಚಿಕನ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು…

  • ಕೋಳಿ ಮಾಂಸ- ಅರ್ಧ ಕೆಜಿ
  • ಬೆಣ್ಣೆ- 25 ಗ್ರಾಂ
  • ಸೋಯಾ ಸಾಸ್ – 1 ಚಮಚ
  • ವಿನೆಗರ್- ಸ್ವಲ್ಪ
  • ಉಪ್ಪು- ರುಚಿಗೆ ತಕ್ಕಷ್ಟು
  • ಎಣ್ಣೆ- ಸ್ವಲ್ಪ
  • ಮೊಟ್ಟೆ- 1
  • ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 2
  • ಕಾರ್ನ್ ಫ್ಲೋರ್- 2 ಚಮಚ
  • ಕಾಳುಮೆಣಸಿನ ಪುಡಿ – 1 ಚಮಚ ಬಿಳಿ
  • ಅಚ್ಚಖಾರದ ಪುಡಿ- 1 ಚಮಚ
  • ಬೆಳ್ಳುಳ್ಳಿ- 8 ಎಸಲು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1.5 ಚಮಚ
  • ಈರುಳ್ಳಿ ಹೂವು – ಸ್ವಲ್ಪ

     

    ಮಾಡುವ ವಿಧಾನ…

    • ಮೊದಲಿಗೆ ಚಿಕನ್ ಅನ್ನು ಸ್ವಲ್ಪ ಉಪ್ಪು, ಮೊಟ್ಟೆಯ ಬಿಳಿಯ ಭಾಗ, ಸೋಯಾ ಸಾಸ್, ಕಾಳು ಮೆಣಸಿನಪುಡಿ, ವಿನೆಗರ್ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮ್ಯಾರಿನೆಟ್ ಮಾಡಿ ಮತ್ತು 15 ರಿಂದ 20 ನಿಮಿಷಗಳು ನೆನೆಯಲು ಬಿಡಿ.
    • ಒಂದು ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಚಿಕನ್ ಪೀಸ್ ಗಳನ್ನು ಹಾಕಿ. ಸ್ವಲ್ಪ ಪ್ರಮಾಣದಲ್ಲಿ ಗೋಲ್ಡನ್ ಕಲರ್ ಬರುವವರೆಗೂ ಎಣ್ಣೆಯಲ್ಲಿ ಬಾಡಿಸಿ. ಕಾರ್ನ್ ಫ್ಲೋರ್’ನ್ನು ಸ್ವಲ್ಪ ನೀರಿಗೆ ಸೇರಿ ಪೇಸ್ಟ್ ಮಾಡಿಕೊಳ್ಳಿ
    • ಈಗ ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಣ್ಣೆ ಮತ್ತು ಬೆಳ್ಳುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿದು, ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹೂವು ಸೇರಿಸಿ. ಕೆಲವು ಸೆಕೆಂಡುಗಳವರೆಗೆ ಇದನ್ನು ತಿರುಗಿಸಿ ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು, ಕಾರ್ನ್ ಫ್ಲೋರ್’ ಪೇಸ್ಟ್ ಎಲ್ಲವನ್ನೂ ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೇಯಿಸಿ. ಇದು ಗಟ್ಟಿಯಾಗುತ್ತಿದ್ದಂತೆ ಸ್ವಲ್ಪ ನೀರು ಹಾಕಿ ಒಂದು ನಿಮಿಷ ಮತ್ತೆ ಬೇಯಿಸಿ.
    • ಈಗ ನೀವು ಹುರಿದುಕೊಂಡ ಚಿಕನ್ ಪೀಸ್ ಗಳನ್ನು ಇದರಲ್ಲಿ ಸೇರಿಸಿ ಎಲ್ಲವನ್ನೂ ಒಮ್ಮೆ ಮಿಶ್ರಣ ಮಾಡಿ ಮತ್ತೆ ಒಂದು ನಿಮಿಷ ಬಿಸಿ ಮಾಡಿ. ಈಗ ರುಚಿಕರವಾದ ಬಟನ್ ಚಿಕನ್ ಸವಿಯಲು ಸಿದ್ಧ.