Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರೈಲು ಡಿಕ್ಕಿಯಾಗಿ ಮೂವರು ಕಾರ್ಮಿಕರ ಸಾವು!

 

ಮಹಾರಾಷ್ಟ್ರ; ರೈಲ್ವೆ ಸಿಗ್ನಲ್‌ ದುರಸ್ಥಿ ಮಾಡುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಟರ್ ಬಳಿಯ ವಸಾಯ್-ನೈಗಾವ್ ನಿಲ್ದಾಣಗಳ ಮಧ್ಯೆ ನಡೆದಿದೆ.

ಮೃತರನ್ನು ಮುಖ್ಯ ಸಿಗ್ನಲ್ ಇನ್ಸೆಕ್ಟರ್ ವಾಸು ಮಿತ್ರ, ಎಲೆಕ್ನಿಕ್ ಸಿಗ್ನಲ್‌ ನಿರ್ವಾಹಕ ಅಧಿಕಾರಿ ಸೋಮನಾಥ್‌ ಉತ್ತಮ್ ಹಾಗೂ ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಸೂಕ್ತ ತನಿಖೆಗೆ ಪಶ್ಚಿಮ ರೈಲ್ವೇ ಆದೇಶಿಸಿದೆ