ಲಂಡನ್ ಗೆ ಹಾರಿದ ರಾಕಿಂಗ್ ಸ್ಟಾರ್ ಯಶ್ ಜೋಡಿ
ಬೆಂಗಳೂರು: ಟಾಕ್ಸಿಕ್ ಸಿನಿಮಾದ ಅಪ್ ಡೇಟ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಲಂಡನ್ ಗೆ ಹಾರಿದ್ದಾರೆ.ಅಲ್ಲಿ ಕ್ರಿಸ್ ಮಸ ಗಾಗಿ ಸಿಂಗಾರಗೊಂಡಿರುವ ಲಂಡನ್ ಬೀದಿಯಲ್ಲಿ ನಿಂತು ಭರ್ಜರಿಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಈ ಫೋಟೋವನ್ನು ಖುದ್ದು ರಾಧಿಕ ಅವರೇ ತಮ್ಮ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇತ್ತ ಟಾಕ್ಸಿಕ್ ಸಿನಿಮಾದ ಬಗ್ಗೆ ಅನೇಕ ಕಡೆ ಚರ್ಚೆಯಾಗುತ್ತಿದೆ. ಅನೇಕರು ಟೈಟಲ್ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಒಂದು ನಿಮಿಷ ಹದಿನೆಂಟು ಸೆಕೆಂಡ್ ನ ‘ಟಾಕ್ಸಿಕ್’ ವಿಡಿಯೋ ಎಲ್ಲೆಡಡೇ ಭಾರೀ ಸದ್ದು ಮಾಡ್ತಿದೆ. ಹೊಸದೊಂದು ಅನುಭವ ಕೊಡ್ತಿದೆ. ಅಷ್ಟೋಂದು ವಿಷಗಳನ್ನ ಈ ಪುಟ್ಟ ವಿಡಿಯೋದಲ್ಲಿ ಅಡಗಿಸಲಾಗಿದೆ.
ಡಿಸೆಂಬರ್ 8ರಂದು ರಿಲೀಸ್ ಆದ ‘ಟಾಕ್ಸಿಕ್’ ಟೈಟಲ್ ಟೀಸರ್ ಗಂಟೆಗಳಲ್ಲಿ ಲಕ್ಷ ಲಕ್ಷ ವ್ಯೂವ್ಸ್ ನ್ನು ಪಡೆದು ಕೊಂಡಿದ್ದು ಈ ಚಿತ್ರ ಅಭಿಮಾನಿ ವಲಯಗಳಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ.