Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಲಷ್ಕರ್ ಇ ತೊಯ್ಬಾದ ಭಯೋತ್ಪಾದಕರು ಅಪರಿಚಿತರ ಗುಂಡೇಟಿಗೆ ಹತ್ಯೆ

ಇಸ್ಲಾಮಾಬಾದ್: ಲಷ್ಕರ್ ಇ ತೊಯ್ಬಾದ ಭಯೋತ್ಪಾದಕರಾದ ಮೊಹಮ್ಮದ್ ಮುಝಾಮಿಲ್ ಮತ್ತು ಆತನ ನಿಕಟವರ್ತಿ ನಯೀಮುರ್ ರಹಮಾನ್ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಬುಧವಾರ ಪಾಕಿಸ್ತಾನದ ಸಿಯಾಲ್ ಕೋಟ್ ನ ಖೋಖ್ರಾನ್ ಚೌ ಕ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಉಗ್ರರನ್ನು ಯಾರು ಗುಂಡು ಹಾರಿಸಿ ಕೊಂದಿದ್ದಾರೆ ಎಂಬುದು ನಿಗೂಢವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ. ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಹಂತಕರು ಪಿಸ್ತೂಲ್ ನಿಂದ ಮುಝಾಮಿಲ್ ಮತ್ತುನಯೀಮುರ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದೃಶ್ಯವಿದೆ. ಘಟನೆಯಲ್ಲಿ ಮೂರನೇ ವ್ಯಕ್ತಿ ಗಾಯಗೊಂಡಿದ್ದು , ಆತನ ಸ್ಥಿತಿ ಕೂಡ ಚಿಂತಾಜನಕವಾಗಿದೆ.