ಲಾರಿಗೆ ಒಮ್ನಿ ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರ ಸಾವು.!
ರಾಮನಗರ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಲಾರಿಗೆ ಒಮ್ನಿ ಕಾರು ಡಿಕ್ಕಿ ಹೊಡೆದಿದ್ದರಿಂದ, ಪತಿ–ಪತ್ನಿ ಸೇರಿದಂತೆ ಒಂದೇ ಕುಟುಂಬದವರು ಮೂವರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಹೊರವಲಯದ ಕೆಂಪೇಗೌಡನದದೊಡ್ಡಿ ಬಳಿಯ ಘಟನೆ ನಡೆದಿದೆ.
ಮೃತರು ಬೆಂಗಳೂರಿನ ಪೀಣ್ಯ 2ನೇ ಹಂತದ ನಿವಾಸಿಗಳಾದ ರಾಜೇಶ್ (50), ಅವರ ಪತ್ನಿ ಸುಮಾ (45) ಹಾಗೂ ಅತ್ತೆ ಲಕ್ಕಮ್ಮ (65) ಮೃತರು. ಗಾಯಗೊಂಡಿರುವ ದಂಪತಿ ಪುತ್ರರಾದ ಮೋಹನ್, ರೋಹನ್, ಸಹೋದರ ಸುರೇಶ್ ಹಾಗೂ ಅವರ ಪುತ್ರ ಸೃಜನ್ಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.