ಲೋಕಸಭಾ ಚುನಾವಣೆ: ABP ಮಾಧ್ಯಮ ಸಮೀಕ್ಷೆಯಲ್ಲಿ INDIA ಮುಂದು..!
ನವದೆಹಲಿ: ABP ಮಾಧ್ಯಮ ನಡೆಸಿದ ಸರ್ವೆಯಲ್ಲಿ INDIA ಮೈತ್ರಿಕೂಟ ಮುನ್ನಡೆ ಸಾಧಿಸಿದೆ.ಇನ್ನುNDA ಮೈತ್ರಿಕೂಟ ಭಾರೀ ಹಿನ್ನಡೆ ಅನುಭವಿಸಿರುವುದನ್ನು ಎಬಿಪಿ ಮಾಧ್ಯಮ ವರದಿ ಮಾಡಿದೆ. 2024 ರಲ್ಲಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದು INDIA ಮೈತ್ರಿಕೂಟದ ಪರ 65% ಮತ್ತು NDA ಮೈತ್ರಿಕೂಟದ ಪರ 35% ಜನ ಮತಚಲಾಯಿಸಿದ್ದಾರೆ. ಇದೀಗ ಈ ಕುರಿತು ಹಲವು ಟ್ವೀಟ್ ಗಳು ಹರಿದಾಡುತ್ತಿದ್ದು ದೇಶದ ವಾತಾವರಣ ಬದಲಾಗುತ್ತಿದ್ದಂತೆ ಗೋಧಿ ಮಾಧ್ಯಮ ಕೂಡ ಬದಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.