ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿ: ಮೂವರು ಸಂಸದರ ಅಮಾನತು
ಬೆಂಗಳೂರು:ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸೇರಿದಂತೆ,ಛತ್ತೀಸ್ಗಢದ ಕಾಂಗ್ರೆಸ್ ಸಂಸದ ದೀಪಕ್ ಬೈಜ್ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಅವರ ಮಗ ನಕುಲ್ ನಾಥ್ ಮತ್ತೆ ಮೂವರು ವಿರೋಧ ಪಕ್ಷಗಳ ಸಂಸದರನ್ನು ಲೋಕಸಭೆಯಿಂದ ಗುರುವಾರ ಅಮಾನತು ಮಾಡಲಾಗಿದೆ.
ಈ ಮೂಲಕ ಸಂಸತ್ ನ ಉಭಯ ಸದನದಿಂದ ಅಮಾನತುಗೊಂಡ ಪ್ರತಿಪಕ್ಷಗಳ ಒಟ್ಟು ಸದಸ್ಯರ ಸಂಖ್ಯೆ 146ಕ್ಕೆ ಏರಿಕೆಯಾದಂತಾಗಿದೆ.
ಸಂಸತನ್ ನಲ್ಲಿ ಡಿಸೆಂಬರ್.13 ರಂದು ಭದ್ರತಾ ಲೋಪ ನಡೆದಿತ್ತು.ಈ ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ನಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಡಿಸೆಂಬರ್ . 14 ರಂದು ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಹೀಗಾಗಿ ಉಭಯ ಸದನಗಳ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಡಿ. 14ರಿಂದ ಈವರೆಗೂ ಒಟ್ಟು ಎರಡೂ ಸದನಗಳಿಂದ 146 ಸಂಸದರನ್ನು ಅಮಾನತು ಮಾಡಲಾಗಿದೆ.
ಗುರುವಾರದಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಆರಂಭವಾದಾಗ ವಿಪಕ್ಷ ಸಂಸದರು ಘೋಷಣೆಗಳನ್ನು ಕೂಗಿದರು.
ಸದನದ ಒಳಗೆ ಪ್ರತಿಭಟನೆ ನಡೆಸುವಂತಿಲ್ಲ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್ ನ ಮೂವರು ಸಂಸದರಿಗೆ ಎಚ್ಚರಿಕೆ ನೀಡಿದರು.
ಆದರೆ ಅವರು ಮಾತಿಗೆ ಯಾರೂ ಕಿವಿಗೊಡಲಿಲ್ಲ. ಪ್ರಶ್ನೋತ್ತರ ಅವಧಿ ಮುಗಿದ ಕೂಡಲೇ, ಪ್ರತಿಭಟನಾನಿರತ ಸದಸ್ಯರಿಗೆ ಎಚ್ಚರಿಕೆ ಕೊಟ್ಟ ಸ್ಪೀಕರ್, ಮೂವರ ಹೆಸರುಗಳನ್ನು ಉಲ್ಲೇಖಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.