ಲೋಕಸಭೆಯಿಂದ ಕಾಂಗ್ರೆಸ್ ನಾಯಕ ಅಮಾನತು : ನಾನು ಪ್ರಧಾನಿಯನ್ನು ಅವಮಾನಿಸಿಲ್ಲ ಎಂದ ಚೌಧರಿ
ನವದೆಹಲಿ : ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿರುವುದು ಇದೇ ಮೊದಲು. ಈ ವಿಷಯವನ್ನು ವಿಶೇಷಾಧಿಕಾರ ಸಮಿತಿಗೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ನಾನು ಯಾರಿಗೂ ತೊಂದರೆ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ನಾನು ಏನನ್ನೂ ತಪ್ಪಾಗಿ ಹೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾಧ್ಯಮದ ಮುಂದೆ ಹೇಳಿದ್ದಾರೆ. ನಾನು ಪ್ರಧಾನಿ ಮೋದಿಯನ್ನು ಅವಮಾನಿಸಿಲ್ಲ. ಮೋದಿಜಿ ಎಲ್ಲದರ ಬಗ್ಗೆ ಮಾತನಾಡುತ್ತಾರೆ ಆದರೆ ಮಣಿಪುರದ ವಿಷಯದಲ್ಲಿ ಅವರು ‘ನೀರವ್’, ಅಂದರೆ ಮೌನವಾಗಿ ಕುಳಿತಿದ್ದಾರೆ. ‘ನೀರವ್’ ಎಂದರೆ ಮೌನವಾಗಿರುವುದು. ನನ್ನ ಉದ್ದೇಶ. ಪ್ರಧಾನಿ ಮೋದಿಯವರನ್ನು ಅವಮಾನಿಸಲು ಅಲ್ಲ. ಪ್ರಧಾನಿ ಮೋದಿ ಅವರಿಗೆ ಅವಮಾನವಾಗಿದೆ ಎಂದು ಅನಿಸಲಿಲ್ಲ, ಆದರೆ ಸುಮ್ಮನೆ ಆ ವಿಚಾರವನ್ನು ಮುನ್ನಲೆ ತಂಡ ಬಿಜೆಪಿಗರು ನನ್ನ ವಿರುದ್ಧ ಈ ಪ್ರಸ್ತಾಪವ ತಂದಿದ್ದಾರೆ. ವಿಶೇಷಾಧಿಕಾರ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ನಾನು ತಿಳಿದುಕೊಂಡಿದ್ದೇ ಆದ್ರೆ ನನ್ನನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.