‘ಲೋಕ’ ಚುನಾವಣೆ ಬಳಿಕ ಮಹಾರಾಷ್ಟ್ರದಂತೆ ಇಲ್ಲಿ ಯಾರು ಹುಟ್ಟುತ್ತಾರೋ?: ಹೆಚ್ಡಿ ಕೆ
ಬೆಂಗಳೂರು: ಲೋಕಸಭಾ ಚುನಾವಣೆ ಮುಗಿಯಲಿ, ಮಹಾರಾಷ್ಟ್ರದಲ್ಲಿ ನಡೀತಲ್ವಾ ಹಾಗೆ ಇಲ್ಲಿ ಯಾರು ಹುಟ್ಟುತ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಐವತ್ತು ಜನ ಕರೆದುಕೊಂಡು ನಿಮ್ಮ ಜತೆ ಬರುತ್ತೇನೆ ಎಂದು ಕೇಂದ್ರದ ನಾಯಕರ ಬಳಿ ರಾಜ್ಯ ನಾಯಕರೊಬ್ಬರು ಮಾತನಾಡಿದ್ದಾರೆ. ಹೀಗಾಗಿ ಈ ಸರ್ಕಾರ ಮುಂದೆ ಏನಾಗುತ್ತೋ ಲೋಕಸಭಾ ಚುನಾವಣಾ ಮುಗಿದ ಬಳಿಕ ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಲೋಕಸಭಾ ಚುನಾವಣೆ ಆದಮೇಲೆ ಎಂದು ಅರ್ಜಿ ಹಾಕ್ಕೊಂಡು ಹೋಗಿದ್ದಾರೆ. 50-60 ಮಂದಿಯನ್ನು ಸಣ್ಣಪುಟ್ಟವರಿಂದ ಕರೆದುಕೊಂಡು ಹೋಗಲು ಆಗುತ್ತಾ? ದಾರು ತಿಂಗಳು ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತು ಎಂದು ಹೆಸರು ಹೇಳದೇ ಡಿಕೆ ಶಿವಕುಮಾರ್ ದೆಹಲಿ ಭೇಟಿ ಬಗ್ಗೆಸ್ಪೋಟಕ ಮಾಹಿತಿ ಬಚ್ಚಿಟ್ಟಿದ್ದಾರೆ.
ಕಾಂಗ್ರೆಸ್ ನಲ್ಲಿ ಹರಿಪ್ರಸಾದ್ ಒಬ್ಬರೇ ಅಲ್ಲ, ಇನ್ನೂ ಹಲವರು ಅಸಮಾಧಾನಿತರು ಇದ್ದಾರೆ. ಹರಿಪ್ರಸಾದ್ ಧೈರ್ಯವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಅಷ್ಟೇ ಎಂದರು. ಈ ಸರ್ಕಾರ ಮುಂದೆ ಏನಾಗುತ್ತೆ ಲೋಕಾಸಭಾ ಚುನಾವಣೆ ಮುಗಿದ ಬಳಿಕ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ