ಲೋಗೋ ಬದಲಾವಣೆ ಮಾಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗ
ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ತನ್ನ ಲೋಗೋವನ್ನು ಬದಲಾವಣೆ ಮಾಡಿದೆ.
ರಾಷ್ಟ್ರೀಯ ಲಾಂಛನದ ಚಿತ್ರವನ್ನು ಕೈಬಿಟ್ಟು ವಿಷ್ಣುವಿನ ಅವತಾರವಾಗಿರುವ ಹಾಗೂ ದೇವತೆಗಳ ವೈದ್ಯನೆಂದು ಪುರಾಣಗಳಲ್ಲಿ ಉಲ್ಲೇಖವಿರುವ ಆಯುರ್ವೇದದ ಹರಿಕಾರ ಎಂದು ಕರೆಯಲ್ಪಡುವ ಧನ್ವಂತರಿಯ ಫೋಟೋ ಅನ್ನು ಸೇರಿಸಿದೆ.
ಇನ್ನು ಈ ಹಿಂದೆ ಅದು ಕಪ್ಪು ಬಿಳುಪು ಇದ್ದುದರಿಂದ ಪ್ರಿಂಟ್‌ಔಟ್‌ಗಳಲ್ಲಿ ಕಾಣಿಸುತ್ತಿರಲಿಲ್ಲ ಎಂದು ಎನ್‌ಎಂಸಿ ಹೇಳಿದೆ.
ಈಗ ಲೋಗೋದ ಮಧ್ಯ ಭಾಗದಲ್ಲಿ ಕಲರ್ ಫೋಟೋ ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.