ವಚನ : —ಸಕಳೇಶ ಮಾದರಸ
ಸ್ವತಂತ್ರ ಲಿಂಗಾಯತ ಧರ್ಮದ ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ, ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.
https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.
ವಚನ: :
ಬೆಟ್ಟದ ಮೇಲಣ ಗಿಡಗಳು ಬೆಟ್ಟವ ಮುಟ್ಟಂತಿಪ್ಪವೆ ?
ವಿವರಿಸಿ ನೋಡಿದಡೆ,
ಸೃಷ್ಟಿಯೊಳಗಣ ಪ್ರಾಣಿಗಳು ಪರಮನ ಮುಟ್ಟದಿಪ್ಪವೆ ?
ಕಷ್ಟರು ಬೇಡವೆಂದು ಬಿಟ್ಟೋಡುತ್ತಿಪ್ಪ
ಪ್ರಾಣಿಗಳನಟ್ಟಿ, ಹಿಡಿದು ಕೊಂದಡೆ,
ಸೈಷ್ಟಿಗೀಶ್ವರನಿಕ್ಕದಿಪ್ಪನೆ ನರಕದಲ್ಲಿ ?
ಒಡೆಯರಿಲ್ಲೆಂದು ಹಲವು ಪ್ರಾಣಿಗಳ ಹರಿಹರಿದು ಕೊಂದಡೆ,
ಹರನಿಕ್ಕದಿಪ್ಪನೆ ಅಘೋರನರಕದಲ್ಲಿ ?
ಸಕಲಪ್ರಾಣಿಗಳಿಗೆ ಮೇಲಾರೈಕೆ,ನಮ್ಮ ಸಕಳೇಶ್ವರದೇವನಲ್ಲದೆ ಮತ್ತೊಬ್ಬರುಂಟೆ?
-ಸಕಳೇಶ ಮಾದರಸ