ವನ್ಯ ಜೀವಿಗಳ ಅಂಗಾಂಗಗಳ ಪದಾರ್ಥ, ಟ್ರೋಫಿಗಳು ಇದ್ದರೆ ಕೂಡಲೇ ಒಪ್ಪಿಸಿ .! ಇಲ್ಲವಾದ್ರೆ.?
ದಾವಣಗೆರೆ :ಸಾರ್ವಜನಿಕರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಪಿಗಳು ಮತ್ತು ಸಂಸ್ಕರಿಸಿದ ಟ್ರೋಪಿಗಳನ್ನು ಅಧ್ಯರ್ಪಿಸಲು ಸಂಬಂಧಪಟ್ಟ ಅರಣ್ಯಇಲಾಖೆ, ಎಸಿಎಫ್, ಡಿಸಿಎಫ್ ಕಚೇರಿಗೆ ನೀಡಲು 90 ದಿನಗಳ ಕಾಲಾವಕಾಶ ನೀಡಲಾಗಿದೆ,
ಅಧ್ಯರ್ಪಿಸಲು ಏ.11 ರಂದು ಕೊನೆಯ ದಿನವಾಗಿದ್ದು, ದಾವಣಗೆರೆ ಜಿಲ್ಲೆಯ ಸಾರ್ವಜನಿಕರು ತಮ್ಮಲ್ಲಿರುವ ವನ್ಯಜೀವಿ ಅಂಗಾಗಳಾದ ಹುಲಿಉಗುರು, ಚಿರತೆಉಗುರು, ಆನೆದಂತ, ಜಿಂಕೆಕೊಂಬು, ವನ್ಯಪ್ರಾಣಿಗಳ ಚರ್ಮ, ವನ್ಯಜೀವಿ ವಸ್ತುಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಹೊಂದಿದ್ದರೆ. ಅಧ್ಯರ್ಪಿಸಬೇಕು.
ಕಚೇರಿಗೆ ಸಲ್ಲಿಸುವ ಮೊದಲು 100 ರೂಪಾಯಿಗಳ ಸ್ಟ್ಯಾಂಪ್ ಪೇಪರ್‍ನಲ್ಲಿ ನೋಟರಿ ಮಾಡಿರಬೇಕು ಮತ್ತು ನೋಟರಿಗೊಂಡ ಅಫಿಡವಿಟನಲ್ಲಿ ಅಧ್ಯರ್ಪಿಸುತ್ತಿರುವ ವನ್ಯಜೀವಿ ಅಂಗಾಂಗ, ಟ್ರೋಪಿಯನ್ನು ಅರ್ಜಿದಾರರು ಪಡೆದ ವಿಧ ಮತ್ತು ವರ್ಷದ ಬಗ್ಗೆ ಸ್ಪಷ್ಟವಾಗಿ ನಮೂದಿಸಿ ದೃಡೀಕರಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಪ್ರಾದೇಶಿಕ ವಲಯ ಕಚೇರಿ, ಮೊ. ನಂ:9481991703, ಜಗಳೂರು ಪ್ರಾದೇಶಿಕ ವಲಯ ಕಚೇರಿ,ಮೊ. ನಂ:9481991705, ಹೊನ್ನಾಳಿ ಪ್ರಾದೇಶಿಕ ವಲಯ ಕಚೇರಿ, ಮೊ. ನಂ:9481991704, ಹೊಸಕೆರೆ ರಂಗಯ್ಯನದುರ್ಗ ವನ್ಯಜೀವಿ ವಲಯ, ಮೊ. ನಂ:9481991706, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ,ದಾವಣಗೆರೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ದಾವಣಗೆರೆ ಇವರನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ..